ಮೊದಲ ಮೂರು ಸೀಸನ್'ಗಳಲ್ಲೂ ಕೂಡ ಹೆಚ್ಚು ಮನರಂಜನೆ ನೀಡಿದ ಅರುಣ್ ಸಾಗರ್,ಸೃಜನ್ ಲೋಕೇಶ್ ಹಾಗೂ ಮಾಸ್ಟರ್ ಆನಂದ್ ಯಾರು ಸಹ ಗೆಲ್ಲಲಿಲ್ಲ.

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್'ಬಾಸ್ ಸೀಸನ್ 4 ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವೀಕ್ಷಕರಲ್ಲಿಯೂ ಸಹ ಈ ಬಾರಿ ಯಾರು ಗೆಲ್ಲಲಿದ್ದಾರೆಂಬ ಗೊಂದಲವುಂಟಾಗಿದೆ. ಕಳೆದ ವಾರ ಗೆಲ್ಲುವ ಪ್ರಬಲ ಸ್ಪರ್ಧಿಗಳಾದ ಮಾಳವೀಕ ಹಾಗೂ ಪ್ರಥಮ್ ಹೊರಗೋಗಿ ಸೀಕ್ರೆಟ್ ರೂಮಿನಲ್ಲಿದ್ದರು.

ಈಗ ಇವರಿಬ್ಬರು ಬಿಗ್'ಬಾಸ್ ಮನೆಗೆ ರಿಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಇಂದು ಬಿಗ್'ಬಾಸ್ ಯಾರನ್ನು ನಾಮಿನೇಟ್ ಮಾಡುತ್ತೀರೆಂದು ಪ್ರತಿಯೊಬ್ಬರನ್ನು ಪ್ರಶ್ನೆ ಕೇಳಿದಾಗ ಎಲ್ಲರು ಪ್ರಥಮ್ ಹೆಸರನ್ನೇ ಹೇಳಿದ್ದಾರೆ. ಹಾಗಾದರೆ ಇಲ್ಲಿ ಗ್ರೂಪಿಸಂ ನಡೆದು ಪ್ರಥಮ್ ಗೆಲ್ಲಬಾರದೆಂದು ನಿರ್ಧರಿಸಿದ್ದಾರಾ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಮೊದಲ ಮೂರು ಸೀಸನ್'ಗಳಲ್ಲೂ ಕೂಡ ಹೆಚ್ಚು ಮನರಂಜನೆ ನೀಡಿದ ಅರುಣ್ ಸಾಗರ್,ಸೃಜನ್ ಲೋಕೇಶ್ ಹಾಗೂ ಮಾಸ್ಟರ್ ಆನಂದ್ ಯಾರು ಸಹ ಗೆಲ್ಲಲಿಲ್ಲ. ಈ ಸೀಸನ್'ನಲ್ಲೂ ಕೂಡ ಮನರಂಜಿಸುವ ಸ್ಪರ್ಧಿ ಕಪ್ ಹಿಡಿಯುವುದು ಅನುಮಾನ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ.