ಬಿಗ್'ಬಾಸ್ ಗ್ರ್ಯಾಂಡ್ ಫಿನಾಲೆ ಬಗ್ಗೆ ಹರಿದಾಡುತ್ತಿದೆ ಬ್ರೇಕಿಂಗ್ ನ್ಯೂಸ್

Big Boss Grand Finale Gossip news
Highlights

ಬಹುತೇಕ ಸಂದೇಶಗಳಲ್ಲಿ ಚೆಂದನ್ ಶೆಟ್ಟಿ ಗೆದ್ದೆ ಬಿಟ್ಟಿದ್ದಾರೆ, 2ನೇ ಸ್ಥಾನ ಜೆಕೆಗೆ ಎಂದು ಹೇಳಿದರೆ, ಮತ್ತು ಹಲವರು ಜೆಕೆ ಜಯಶಾಲಿ ರನ್ನರ್ ಅಪ್ ಚೆಂದನ್ ಎನ್ನುತ್ತಿದ್ದಾರೆ.

ಬಿಗ್ ಬಾಸ್'ನ 5ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಇಂದು ಅದ್ದೂರಿಯಾಗಿ ನಡೆಯುತ್ತಿದೆ. ಜೆಕೆ, ಚಂದನ್ ಶೆಟ್ಟಿ, ದಿವಾಕರ್ ಹಾಗೂ ನಿವೇದಿತಾ ಗೌಡ ಫೈನಲ್ ತಲುಪಿದ್ದಾರೆ.

ಈ ನಡುವೆ ಇವರೇ ಗೆದ್ದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಗುಸುಗುಸು ಮಾತು, ಹಸಿಬಿಸಿ ಚರ್ಚೆಗಳು ಸುಳಿದಾಡುತ್ತಿವೆ. ಬಹುತೇಕ ಸಂದೇಶಗಳಲ್ಲಿ ಚೆಂದನ್ ಶೆಟ್ಟಿ ಗೆದ್ದೆ ಬಿಟ್ಟಿದ್ದಾರೆ, 2ನೇ ಸ್ಥಾನ ಜೆಕೆಗೆ ಎಂದು ಹೇಳಿದರೆ, ಮತ್ತು ಹಲವರು ಜೆಕೆ ಜಯಶಾಲಿ ರನ್ನರ್ ಅಪ್ ಚೆಂದನ್ ಎನ್ನುತ್ತಿದ್ದಾರೆ.

ಇನ್ನು ಕೆಲವರು ನಿವೇದಿತಾಗೆ ಗೆಲುವಿನ ಪಟ್ಟ, ಚಂದನ್ 2ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂಬ ಸುದ್ದಿಗಳನ್ನು ಹರಿಯಬಿಟ್ಟಿದ್ದಾರೆ. ಮತ್ತೂ ಕೆಲವರ ಸಂದೇಶಗಳಲ್ಲಿ ಚಂದನ್ ಗೆಲುವು ನಿವೇದಿತಾ 2ನೇ ಸ್ಥಾನ ಪಡೆದಿದ್ದಾರಂತೆ. ಆದರೆ ಗೆಲುವಿನ ನಿಜ ಗುಟ್ಟು ಇನ್ನು ಅಧಿಕೃತವಾಗಿ ಹೊರಬಂದಿಲ್ಲ. ಸದ್ಯ ವಾಸ್ತವದಲ್ಲಿ ಶೃತಿ ಔಟಾಗಿರುವುದು ಸತ್ಯ.

loader