ಬಿಗ್ ಬಾಸ್ ಟ್ರೋಫಿ ಯಾರ ಮುಡಿಗೆ ,ಲೀಕಾಯ್ತಾ ನ್ಯೂಸ್ ? ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ

First Published 25, Jan 2018, 7:02 PM IST
Big Boss Final Gossip News New
Highlights

ದಿವಾಕರ್ ಕೂಡ ಮೊದಲ ಸ್ಥಾನ ಚಂದನ್ ಶೆಟ್ಟಿಗೆ ಕೊಟ್ಟು, ನಂತರ ಜೆಕೆಗೆ ದು ಹೇಳಿದರು. ಬಳಿಕ ಶೃತಿ ಕೂಡ ಮೊದಲ ಸ್ಥಾನ ಜೆಕೆ, ನಂತರ ಚಂದನ್'ಗೆ ಕೊಟ್ಟರು. ನಿವೇದಿತಾ, ಚಂದನ್ ಈ ಬಾರಿಯ ಬಿಗ್ ಭಾಸ್ ವಿನ್ನರ್ ಅಂದ್ರು. ಹೀಗೆ ಮೂವರು ಚಂದನ್ ಶೆಟ್ಟಿಗೆ ಮೊದಲ ಸ್ಥಾನ ಕೊಟ್ರೆ ಇಬ್ಬರು ಜೆಕೆ ವಿನ್ನರ್ ಅಂತ ಹೇಳಿದರು.

ಶತದಿನಗಳನ್ನು ಪೂರೈಸ್ತಿರೋ ಬಿಗ್ ಬಾಸ್ ಶೋ ಗ್ರ್ಯಾಂಡ್ ಫಿನಾಲೆ ಹತ್ತಿರ ಬಂದಿದೆ. ಅಂತಿಮ ವಾರದಲ್ಲಿ ಹಣಾಹಣಿ ನಡೆಸುತ್ತಿರುವ ಬಿಗ್'ಬಾಸ್ ಸ್ಪರ್ಧೆಯಲ್ಲಿ ಗೆಲ್ಲೋದು ಯಾರು ಅನ್ನೊ ಬಗ್ಗೆ ದೊಡ್ಡ ಚರ್ಚೆಗಳು ಶುರುವಾಗಿದೆ.

ಆದರೆ ಗ್ರ್ಯಾಂಡ್ ಫಿನಾಲೇ ನಡೆಯೋ ಮೊದಲೆ ಬಿಗ್ ಬಾಸ್ ವಿನ್ನರ್ ಯಾರು ಅನ್ನುವುದರ ಬಗ್ಗೆ  ಗುಸುಗುಸು ಶುರುವಾಗಿದೆ.

ಜನಸಾಮಾನ್ಯರಾಗಿ ಎಂಟ್ರಿಕೊಟ್ರು ಒಳ್ಳೆಯ ಹಾಸ್ಯ ಪ್ರಜ್ಞೆ ಮೂಲಕ ಜನ ಮನ ಗೆದ್ದಿರುವ ದಿವಾಕರ್ ಗೆಲ್ಲಬೇಕು ಅಂತ ಕೆಲವರು ವಾದಿಸಿದರೆ, ಸ್ಯಾಂಡಲ್'ವುಡ್'ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನಟ ಜೆಕೆ ಗೆಲ್ಲಬೇಕು ಅನ್ನೋದು ಅವರ ಅಭಿಮಾನಿಗಳ ಒಲವು. ಇನ್ನು ಕನ್ನಡ ರಾಪರ್ ಚಂದನ್ ಶೆಟ್ಟಿ ಗೆಲ್ಲಲೇ ಬೇಕಾದ ಸ್ಪರ್ಧಿ ಅನ್ನೋದು ಬಹುತೇಕ ಬಿಗ್ ಬಾಸ್ ವೀಕ್ಷಕರ ಕನಸಾಗಿದೆ. ಹಾಗಿದ್ದರೆ ದಿವಾಕರ್, ಚಂದನ್ ಶೆಟ್ಟಿ , ಜೆಕೆ, ನಿವೇದಿತಾ ಗೌಡ, ಶೃತಿ ಈ ಐವರಲ್ಲಿ  ಬಿಗ್ ಬಾಸ್ ವಿನ್ನರ್ ಯಾರು ? ಲೀಕಾಗಿರೋ ಮ್ಯಾಟರ್​ ಏನು? ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ.

ಸಮೀರ್ ಆಚಾರ್ಯ ಹೊರಬಿದ್ದ ಬಳಿಕ ಉಳಿದ ಐದು ಸ್ಪರ್ಧಿಗಳಿಗೆ ಒಂದು ಟಾಸ್ಕ್ ಕೊಡಲಾಗಿತ್ತು. ಟಾಪ್ ಫೈವ್ ಸ್ಪರ್ಧಿಗಳಲ್ಲಿ ಗೆಲ್ಲಬೇಕಾಗಿರೋದು ಯಾರು ಅನ್ನೋ ನಿರ್ಧಾರವನ್ನು 5 ಜನರಿಗೇ ನೀಡಲಾಯಿತು. ಆಗ ಹೊರಬಿದ್ದ ಸತ್ಯ ಇದು.

 ಟಾಸ್ಕ್'ನಲ್ಲಿ ಮೊದಲಿಗರಾಗಿ ಬಂದ ನಟ ಜೆಕೆ, ಚಂದನ್ ಶೆಟ್ಟಿಗೆ ವಿನ್ನರ್ ಪಟ್ಟ ಕೊಟ್ರೆ ಎರಡನೇ ಸ್ಥಾನವನ್ನುವನ್ನು ತನಗೆ ಕಾಯ್ದುಕೊಂಡು ಮೂರನೇ ಸ್ಥಾನ ದಿವಾಕರ್'ಗೆ ಕೊಡಬಹುದು ಎಂದರು. ದಿವಾಕರ್ ಕೂಡ ಮೊದಲ ಸ್ಥಾನ ಚಂದನ್ ಶೆಟ್ಟಿಗೆ ಕೊಟ್ಟು, ನಂತರ ಜೆಕೆಗೆ ದು ಹೇಳಿದರು. ಬಳಿಕ ಶೃತಿ ಕೂಡ ಮೊದಲ ಸ್ಥಾನ ಜೆಕೆ, ನಂತರ ಚಂದನ್'ಗೆ ಕೊಟ್ಟರು. ನಿವೇದಿತಾ, ಚಂದನ್ ಈ ಬಾರಿಯ ಬಿಗ್ ಭಾಸ್ ವಿನ್ನರ್ ಅಂದ್ರು. ಹೀಗೆ ಮೂವರು ಚಂದನ್ ಶೆಟ್ಟಿಗೆ ಮೊದಲ ಸ್ಥಾನ ಕೊಟ್ರೆ ಇಬ್ಬರು ಜೆಕೆ ವಿನ್ನರ್ ಅಂತ ಹೇಳಿದರು.

ಹಾಗಾದರೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟೀನೇನಾ? ಅಥವಾ ಜೆಕೆನಾ? ಚಂದನ್'ಗೆ  ಮೊದಲ ಸ್ಥಾನ ಕೊಡ್ತಿದ್ದ ಹಾಗೆ ಜೆಕೆ ಆ ಸ್ಥಾನ ಒಪ್ಪಿಕೊಳ್ಳಲು ನಿರಾಕರಿಸಿ ನಾನು ನಿನಗಿಂತ ಹೆಚ್ಚು ಅರ್ಹನಲ್ಲ, ನೀನೇ ಮೊದಲ ಸ್ಥಾನಕ್ಕೆ ಅರ್ಹ, ನಾನು ಎರಡನೇ ಸ್ಥಾನಕ್ಕೆ ಸೂಕ್ತ ಅಂತ ವಾದಿಸಿದರು. ಹೊರಗಡೆ ನೋಡ್ತಿರೋ ಕನ್ನಡಿಗ ಪ್ರೇಕ್ಷಕರಿಗೂ ಕೂಡ  ಕನ್ನಡ ರಾಪರ್ ಚಂದನ್ ಶೆಟ್ಟಿ ಅಥವಾ ಜೆಕೆ ಅವರೆ ವಿನ್ನರ್ ಆಗಬೇಕು ಎಂದುಕೊಂಡು ಕಾರ್ಯಕ್ರಮ ನೋಡ್ತಿದ್ದಾರೆ. ಆದರೆ ಬಿಗ್'ಬಾಸ್'ನಲ್ಲಿ ಜನರ ಅಪೇಕ್ಷೆ ಒಂದಾದರೆ  ಕೊನೆಯಲ್ಲಿ ಬರುವ ಫಲಿತಾಂಶವೇ ಬೇರೆ ಇರುತ್ತೆ.  ಈ ಬಾರಿ ಬಿಗ್ ಬಾಸ್ 5 ಸಿಸನ್ ವಿನ್ನರ ಪಟ್ಟ ಯಾರ ಮುಡಿಗೆ ಸೇರಿಕೊಳ್ಳಬಹುದು ಅನ್ನೋದು ಭಾನುವಾರದ ಗ್ರ್ಯಾಂಡ್ ಫಿನಾಲೆಯಲ್ಲಿ ಗೊತ್ತಾಗಲಿದೆ. ವೈಟ್ ಮಾಡಿ

loader