ರಾಧಿಕಾ ಕುಮಾರಸ್ವಾಮಿ ಬೆಲ್ಲಿ ಡ್ಯಾನ್ಸ್ ಫುಲ್ ವೈರಲ್

First Published 26, May 2018, 7:07 PM IST
Belly dance of Radhika Kumaraswamy makes you dumbfounded
Highlights

ಕಳೆದೊಂದು ವಾರದಿಂದ ಸಿಕ್ಕಾಪಟ್ಟೆ ಚಾಲ್ತಿಯಲ್ಲಿರುವ ಹೆಸರು ನಟಿ ರಾಧಿಕಾ ಕುಮಾರಸ್ವಾಮಿ ಅವರದ್ದು. ಒಂದಲ್ಲ ಒಂದೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಈ ಸ್ಯಾಂಡಲ್‌ವುಡ್ ನಟಿಯ ಹಳೆಯ ವೀಡಿಯೋವೊಂದು ಇದೀಗ ಮತ್ತೆ ಸದ್ದು ಮಾಡುತ್ತಿದ್ದು, ನೀವೂ ನೋಡಿ ಕಣ್ತುಂಬಿಕೊಳ್ಳಿ.

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಿನಿಂದಲೂ ನಟಿ ರಾಧಿಕಾ ಕುಮಾರಸ್ವಾಮಿಯೂ ಸುದ್ದಿಯಲ್ಲಿದ್ದಾರೆ. ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆದ ಹೆಸರೆಂದು ಒಂದು ದಿನ ಸುದ್ದಿಯಾಗಿದ್ದರೆ, ಮತ್ತೊಂದು ದಿನ ಕಾಂಟ್ರ್ಯಾಕ್ಟ್ ಚಿತ್ರದ ಪೋಸ್ಟ್‌ಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚಾಲ್ತಿಯಲ್ಲಿದ್ದರು. ಇದೀಗ ಮತ್ತೆ ಸ್ಯಾಂಡಲ್‌ವುಡ್ ಸ್ವೀಟಿ ಸದ್ದು ಮಾಡುತ್ತಿದ್ದು, ಅವರ ಬೆಲ್ಲಿ ಡ್ಯಾನ್ಸ್ ವೈರಲ್ ಆಗುತ್ತಿದೆ.

ಇನ್‌ಸ್ಟಾ‌ಗ್ರಾಮ್‌ನಲ್ಲಿ ಮಾಡಿದ ಡ್ಯಾನ್ಸ್‌ನ ಈ ಪೋಸ್ಟ್ ಈಗ ಹೆಚ್ಚು ಜನಪ್ರಿಯವಾಗುತ್ತಿದೆ. ಹಾಗಂಥ ಇದೇನು ಹೊಸ ಪೋಸ್ಟ್ ಅಲ್ಲ. ಏಳು ತಿಂಗಳ ಹಿಂದೆಯೇ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಡ್ಯಾನ್ಸ್ ವೀಡಿಯೋ ಎಂಥವರನ್ನೂ ಬೆರಗುಗೊಳಿಸುವಂತಿದೆ.

 

 

ಸೌಂದರ್ಯ, ಫಿಟ್‌ನೆಸ್..ಎಲ್ಲವೂ ಪರ್ಫೇಕ್ಟ್ ಆಗಿರೋ ರಾಧಿಕಾ ಡ್ಯಾನ್ಸ್ ಅನ್ನು ನೀವೂ ಕಣ್ತುಂಬಿಕೊಳ್ಳಿ....
 

loader