ಬೆಂಗಳೂರು(ಸೆ.24): ಸಿನಿಮಾದ ಟೈಟಲ್ ವಿವಾದಕ್ಕೆ ಸಿಲುಕಿದೆ. ಟೈಟಲ್ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶನ ಎಸ್.ಮಹೇಂದರ ವಿರುದ್ದ ನಟ ಬಿ.ಸಿ ಪಾಟೀಲ್ ಗರಂ ಆಗಿದ್ದಾರೆ. ಒನ್ಸ್ ಮೋರ್ ಕೌರವ ಸಿನಿಮಾದ ಟೈಟಲನ್ನು ನಾನು ರಿಜಿಸ್ಟರ್ ಮಾಡಿಸಿದ್ದೇನೆ. ಈ ಸಿನಿಮಾ ಮಾಡುವುದಕ್ಕೆ ಎಸ್. ಮಹೇಂದರ್‌ಗೆ ಹಣವನ್ನು ಕೊಟ್ಟಿದ್ದೇನೆ. ಆದರೆ ಇವತ್ತು ನನ್ನನ್ನ ಬಿಟ್ಟು ಸಿನಿಮಾ ಮಾಡುತ್ತಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿಯ ಹಿರೇಕೆರೂರಿನಲ್ಲಿ ಮಾತನಾಡಿದ ಪಾಟೀಲ್, ಕರ್ನಾಟಕಕ್ಕೆ ಒಬ್ಬನೆ ಕೌರವ, ಮೀಸೆ ಹಚ್ಚಿಕೊಂಡವರೆಲ್ಲ ಕೌರವ ಆಗಲು ಸಾಧ್ಯವಿಲ್ಲ. ಅದು ಮಹೇಂದರ ಅವರ ದಡ್ಡತನ ಅಂತ ಪಾಟೀಲ್ ಗುಡುಗಿದ್ದಾರೆ.
ಎಸ್. ಮಹೇಂದರ್ ವಿರುದ್ಧ ಬಿ.ಸಿ.ಪಾಟೀಲ್ ಗರಂಆಗಿದ್ದು ಏಕೆ ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos
