ಬಿಗ್‌ಬಾಸ್ ಸೀಸನ್ - 6 ವಾರ್ ಯಾಕೋ ನಿಲ್ಲುವ ಸೂಚನೆ ಸಿಗುತ್ತಿಲ್ಲ. ಬಿಗ್‌ಬಾಸ್ ಮನೆಯಿಂದ ಹೊರ ಬಂದಮೇಲೆ ಆ್ಯಂಡಿ ಮತ್ತು ಕವಿತಾ ನಡುವೆ ಕಿತ್ತಾಟ ಮುಂದುವರಿಯುತ್ತಲೇ ಇದೆ.

ಮಹಿಳಾ ಆಯೋಗದ ಮುಂದೆ ಆ್ಯಂಡೂ ವಿರುದ್ಧ ಕಿರುಕುಳದ ಆರೋಪ ಹೊರಿಸಿ, ದೂರು ದಾಖಲಿಸಿದರೆ, ಆ್ಯಂಡಿ ಕವಿತಾ ವಿರುದ್ಧ ಜನಾಂಗೀಯ ನಿಂದನೆಯ ಆರೋಪ ಮಾಡುತ್ತಿದ್ದಾರೆ.

 

ಬಿಬಿ ಮನೆಯಲ್ಲಿ ತಮಾಷೆ ಮಾಡಿಕೊಂಡು, ಎಲ್ಲರ ಕಾಲೆಳೆಯುತ್ತಿದ್ದಆ್ಯಂಡಿ ಕೆಲವರಿಗೆ ಆಪ್ತನಾಗಿದ್ದರೆ, ಮತ್ತೆ ಕೆಲವರಿಗೆ ಕಿರಿಕಿಯನ್ನು ಉಂಟು ಮಾಡುತ್ತಿದ್ದ. ಮನೆಯೊಳಗಿದ್ದಾಗ ಇರಲಿ, ಹೊರ ಬಂದ ಮೇಲೂ ಆ್ಯಂಡೂ ಆಡಿದ ಮಾತುಗಳು ನೋವುಂಟು ಮಾಡಿವೆ ಎಂದು ಕವಿತಾ ದೂರಿದ್ದಾರೆ. ಚಿನ್ನುವಿನ ಈ ಆರೋಪಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆ್ಯಂಡೂ ಪ್ರತ್ಯಾರೋಪ ಮಾಡಿದ್ದಾರೆ.

ಕಿರುಕುಳ: ಬಿಗ್‌ಬಾಸ್ ಸಹಸ್ಪರ್ಧಿ ಮೇಲೆ ದೂರು ದಾಖಲಿಸಿದ ನಟಿ

 

'ಮಜಾ ಟಾಕಿಸ್‌ನಲ್ಲಿ ಕವಿತಾಳಿಗೆ ಅವಮಾನಿಸುವಂತೆ ಮಾತನಾಡಿಲ್ಲ. ಅಲ್ಲದೆ ತಾನು ಕ್ರಿಶ್ವಿಯನ್ ಆದ ಕಾರಣ ಕವಿತಾಳಿಗೆ ನನ್ನ ಕಂಡರೆ ಆಗುತ್ತಿರಲಿಲ್ಲ. ಅದಕ್ಕೆ ಈ ರೀತಿ ಆರೋಪಿಸುತ್ತಿದ್ದಾರೆ,' ಎಂದು ಆ್ಯಂಡ್ಯೂ ಹೇಳುತ್ತಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಇವೆಲ್ಲಾ ನಿಜಾನಾ ಎಂದು ಆ್ಯಂಡೂ ಅವರನ್ನು ಪ್ರಶ್ನಿಸಿದಾಗ 'ಜನರು ನನ್ನ ತಪ್ಪುಗಳನ್ನು ಕ್ಷಮಿಸಿ, ಪ್ರೀತಿ ತೋರಿಸಿ ವಾರ ವಾರವೂ ಸೇವ್ ಮಾಡುತ್ತಿದ್ದರು. ಆದರೆ, ಒಮ್ಮೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೈಕ್ ಇಲ್ಲದಿದ್ದಾಗಲೂ ನನ್ನ ಧರ್ಮದ ಬಗ್ಗೆ ಕವಿತಾ ಕೆಟ್ಟದಾಗಿ ಮಾತನಾಡಿದ್ದರು. ಇದು ನನ್ನ ಮನಸ್ಸಿಗೆ ನೋವಾಗಿದ್ದರೂ, ನಾನೆಲ್ಲೂ ಹೇಳಿಕೊಂಡಿಲ್ಲ,' ಎಂದು ಆ್ಯಂಡೂ ಕವಿತಾ ಆರೋಪಕ್ಕೆ ಟ್ವಿಸ್ಟ್ ನೀಡಿದ್ದಾರೆ.