ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಅದ್ಧೂರಿ ವೆಚ್ಛದಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. 2017 ರ ಏಪ್ರಿಲ್ 28 ರಂದು ‘ಬಾಹುಬಲಿ-2’ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. 

ಹೈದ್ರಾಬಾದ್(ಅ.15): ವಿಶ್ವದ ಗಮನ ಸೆಳೆದ ಚಿತ್ರ ಬಾಹುಬಲಿಯಶಸ್ಸಿನ ನಂತರ ಬಹುನಿರೀಕ್ಷಿತ ‘ಬಾಹುಬಲಿ-2’ ಚಿತ್ರದ ಬಿಡುಗಡೆ ಡೇಟ್ ಫಿಕ್ಸ್ ಆಗಿದೆ.

ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಅದ್ಧೂರಿ ವೆಚ್ಛದಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. 2017 ರ ಏಪ್ರಿಲ್ 28 ರಂದು ‘ಬಾಹುಬಲಿ-2’ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. 

ಅದ್ಭುತ ದೃಶ್ಯಕಾವ್ಯದಂತಿದ್ದ ‘ಬಾಹುಬಲಿ’ಯಲ್ಲಿ ಸಾಹಸ ದೃಶ್ಯಗಳು ಮೈನವಿರೇಳಿಸುವಂತಿದ್ದವು.ಅದೇ ರೀತಿಯಲ್ಲೇ 2 ನೇ ಭಾಗದಲ್ಲಿಯೂ ಸಾಹಸ ದೃಶ್ಯಗಳಿವೆ ಎನ್ನಲಾಗಿದೆ. 

ಮೊದಲ ಭಾಗಕ್ಕಿಂತಲೂ ಸಾಹಸದ ದೃಶ್ಯಗಳು ರೋಚಕವಾಗಿವೆ ಎಂದು ಚಿತ್ರದ ಪಾತ್ರಧಾರಿ ರಾಣಾ ದಗ್ಗುಬಾಟಿ ಹೇಳಿದ್ದಾರೆ. ಅಲ್ಲದೇ ‘ಬಾಹುಬಲಿ-2’ ಚಿತ್ರ ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ.