ಬಾಹುಬಲಿ ನಟ ಮಧು ಪ್ರಕಾಶ್ ಪತ್ನಿ ಭಾರತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ- ಪತ್ನಿಯರ ನಡುವಿನ ಜಗಳವೇ ಭಾರತಿ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. 

ಮಧು ಪ್ರಕಾಶ್ ಜಿಮ್ ಮುಗಿಸಿ ಮನೆಗೆ ಬಂದಾಗ ಪತ್ನಿ ನೇಣಿಗೆ ಶರಣಾಗಿರುವುದು ಗಮನಕ್ಕೆ ಬಂದಿದೆ. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಮಧು ಪ್ರಕಾಶ್ ಪ್ರತಿದಿನ ಮನೆಗೆ ತಡವಾಗಿ ಬರುತ್ತಿದ್ದರು. ಈ ವಿಚಾರವಾಗಿ ಆಗಾಗ ಮಾತಾಗುತ್ತಿತ್ತು ಎನ್ನಲಾಗಿದೆ. 

ಸಾಹೋ ಸುನಾಮಿ; ತೊಡೆ ತಟ್ಟಿ ನಿಂತ ದಚ್ಚು- ಕಿಚ್ಚ!

ಭಾರತಿ ಪತಿಗೆ ಕರೆ ಮಾಡಿ ಕೂಡಲೇ ಮನೆಗೆ ಬರುವಂತೆ ಹೇಳಿದಾಗ ಪ್ರಕಾಶ್ ಮನೆಗೆ ಬರಲು ನಿರಾಕರಿಸುತ್ತಾರೆ. ಆಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿ ಬೆದರಿಕೆ ಹಾಕಿದರೂ ಪ್ರಕಾಶ್ ಕೇರ್ ಮಾಡುವುದಿಲ್ಲ. ಇದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಜೊತೆಗೆ ವರದಕ್ಷಿಣೆ ಕಿರುಕುಳದ ಆರೋಪವೂ ಕೇಳಿ ಬಂದಿದೆ.  

ಪ್ರೇಮಿಗಳಿಗೆ ಲವ್ ಆ್ಯಂಥಮ್ ಕೊಟ್ಟ ಸಾಹೋ !

ಮಧು ಹಾಗೂ ಭಾರತಿ ಕೆಲಕಾಲ ಹೈದರಾಬಾದ್ ನಲ್ಲಿ ಲೀವಿಂಗ್ ಟುಗೆದರ್ ನಲ್ಲಿದ್ದರು. ಆನಂತರ 2015 ರಲ್ಲಿ ಮದುವೆಯಾಗಿದ್ದರು. ಪ್ರಕಾಶ್ ಬಾಹುಬಲಿ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದನ್ನು ಮಾಡಿದ್ದಾರೆ.