ಮುಂಬೈ(ಸೆ.17) ಈಗಾಗಲೇ ಸಾಕಷ್ಟು ನಟಿಯರು ಚಿತ್ರರಂಗದಲ್ಲಿಯ ಕಾಸ್ಟಿಂಗ್ ಕೌಚ್​ ಹಾಗೂ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಎಲ್ಲರೆದುರೆ ಹೇಳಿಕೊಂಡಿದ್ದಾರೆ. ಈಗ ಯುವ  ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ತಾವು ಎದುರಿಸಿದ್ದ ಕರಾಳ ಅನುಭವ ಹೇಳಿದ್ದಾರೆ.

ಕೇವಲ ನಟಿಯರಿಗೆ ಮಾತ್ರವಲ್ಲ, ನಟರಿಗೂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಸಂದರ್ಭ ಎದುರಾಗಬಹುದು ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿದೆ.  ಹಾಗಾದರೆ ಆಯಷ್ಮಾನ್​ ಹೇಳಿದ್ದೇನು? ಇಲ್ಲಿದೆ ಉತ್ತರ.

ಆಯುಷ್ಮಾನ್ ಖುರಾನಾ,  ಆಡಿಷನ್​ಗೆ ತೆರಳಿದ್ದರಂತೆ. ಈ ವೇಳೆ ನಿರ್ದೇಶಕನೊಬ್ಬ ಇವರ ಜತೆ ಅಶ್ಲೀಲತೆಯಿಂದ ಮಾತಾಡಿಸಿದ್ದಲ್ಲದೇ, ಇವರ ಪ್ರೈವೆಟ್​ ಪಾರ್ಟ್​​ನ್ನು ತೋರಿಸುವಂತೆ ಕೇಳಿಕೊಂಡಿದ್ದರಂತೆ. ಇದರಿಂದ ತೀವ್ರ ಮುಜುಗರಕ್ಕೆಗುರಿಯಾದ ನಾನು ಅಲ್ಲಿಂದ ಹಿಂದಕ್ಕೆ ಬಂದೆ ಎಂದು ಬಾಲಿವುಡ್ ನಟ  ಹೇಳಿದ್ದಾರೆ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಆತಂಕಕಾರಿ ಮಾಹಿತಿಯನ್ನು ಖುರಾನಾ ಹೊರಹಾಕಿದ್ದಾರೆ.