ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಿನ್ನೆ ನಡೆಯಿತು. ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರರಂಗದ ದಿಗ್ಗಜರ ಉಪಸ್ಥಿತಿಯಲ್ಲಿ ಧ್ವನಿಸುರಳಿ ಬಿಡುಗಡೆಯಾಗಿದೆ.
ಹೈದರಾಬಾದ್(ಮಾ.27): ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಿನ್ನೆ ನಡೆಯಿತು. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರರಂಗದ ದಿಗ್ಗಜರ ಉಪಸ್ಥಿತಿಯಲ್ಲಿ ಧ್ವನಿಸುರಳಿ ಬಿಡುಗಡೆಯಾಗಿದೆ.
ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ ಬಾಹುಬಲಿ-2 ಚಿತ್ರ ತೆರೆ ಮೇಲೆ ಬರುವುದನ್ನೇ ಪ್ರೇಕ್ಷಕ ಎದುರುನೋಡುತ್ತಿದ್ದಾನೆ. ಇದರ ನಡುವೆ ನಿನ್ನೆ ಹೈದರಾಬಾದ್ ನಲ್ಲಿ ಚಿತ್ರದ ಆಡಿಯೋ ರಿಲೀಸ್ ಆಗಿದೆ. ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಹುಬಲಿ-2 ಚಿತ್ರದ ಆಡಿಯೋ ಆಲ್ಪಂ ಲಾಂಚ್ ಆಗಿದೆ. ಬಾಹುಬಲಿ-2 ಆಡಿಯೋ ಹಕ್ಕನ್ನು ದಕ್ಷಿಣ ಭಾರತದ ಖ್ಯಾತ ಆಡಿಯೋ ಕಂಪನಿ ಲಹರಿ ಮ್ಯೂಸಿಕ್ ಹೊರ ತರುತ್ತಿದ್ದು, 5 ಹಾಡುಗಳುಳ್ಳ ಆಡಿಯೋ ಆಲ್ಪಂ ನಿನ್ನೆ ಬಿಡುಗಡೆಗೊಳಿಸಲಾಯ್ತು.
ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಎಮ್.ಎಮ್ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದು, ದಲೆರ್ ಮೆಹೆಂದಿ, ಕೀರವಾಣಿ, ಕಾಲ ಭೈರವ, ಶ್ರೀನಿಧಿ ಸೇರಿದಂತೆ ಮುಂತಾದವರು ಹಾಡಿದ್ದಾರೆ. ಇನ್ನು, ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಾಯಕ ಪ್ರಭಾಸ್, ನಟಿ ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ವಿಜಯೇಂದ್ರ ಪ್ರಸಾದ್, ರಮ್ಯ ಕೃಷ್ಣ, ಕರಣ್ ಜೋಹಾರ್ ಉಪಸ್ಥಿತರಿದ್ದರು.
ಒಟ್ಟಾರೆ, ತನ್ನ ಟ್ರೇಲರ್'ನಿಂದಲೇ ಭಾರೀ ಸದ್ದು ಮಾಡಿರುವ ಚಿತ್ರ, ಏಪ್ರಿಲ್ 28ರಂದು ತೆರೆ ಮೇಲೆ ಬರಲಿದ್ದು, ಸಿನಿ ಪ್ರಿಯರು ಎದುರು ನೋಡುತ್ತಿದ್ದಾರೆ.
