ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಸಂಗೀತಕ್ಕೆ ಮಾಂತ್ರಿಕ ಸ್ಪರ್ಶ ಕೊಡುವ ಅದ್ಭುತ ಮ್ಯೂಸಿಕ್ ಕಂಪೋಸರ್. ಇವರ ಹಾಡುಗಳೆಲ್ಲಾ ಒಂದಕ್ಕಿಂತ ಒಂದು ಡಿಫರೆಂಟ್. ಎಂಥವರನ್ನು ಮಂತ್ರ ಮುಗ್ಧರನ್ನಾಗಿಸಿ ಬಿಡುತ್ತಾರೆ. ಅಂತದ್ದೇ ಒಂದು ಅದ್ಭುತ ಹಾಡನ್ನು ರೆಹಮಾನ್ ಕೊಟ್ಟಿದ್ದಾರೆ. 

ಹಿಂದೂಗಳ ಆರಾಧ್ಯ ನದಿ, ಜೀವನದಿ ಗಂಗಾ ಬಗ್ಗೆ ರೆಹಮಾನ್ ಅದ್ಭುತವಾದ ಹಾಡೊಂದನ್ನು ಕಂಪೋಸ್ ಮಾಡಿದ್ದಾರೆ. ಈ ಹಾಡಿನಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದಾರೆ. ಭಾರತದ ವಿವಿಧೆಡೆ ಇರುವ ಪ್ರಾಕೃತಿಕ ಸೌಂದರ್ಯವಿರುವ ಜಾಗಗಳಲ್ಲಿ ಈ ಹಾಡಿನ ವಿಡಿಯೋ ಮಾಡಿದ್ದಾರೆ. 

Ganga: the River of People ಹಾಡನ್ನು ಅಪೋಲೋ ಟೈರ್ ಜಾಹಿರಾತಿಗಾಗಿ ಮಾಡಲಾಗಿದೆ. ಈ ವಿಡೀಯೋವನ್ನು ರೆಹಮಾನ್ ಶೇರ್ ಮಾಡಿಕೊಂಡು, ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸುವ ಈ ಹಾಡಿನ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ. 

 

ಸಚಿನ್ ತೆಂಡೂಲ್ಕರ್ ಕೂಡಾ ಶೇರ್ ಮಾಡಿಕೊಂಡಿದ್ದಾರೆ.