ತಾಯಿ, ಸಹೋದರರ ಜೊತೆ ಆಗಮಿಸಿದ್ದ ಅನುಷ್ಕಾಳನ್ನ ನೋಡಲು ಅಭಿಮಾನಿಗಳು ಸಾಗರವೇ ಬಂದಿತ್ತು.. ಹಾಗೂ ತಮ್ಮ ನೆಚ್ಚಿನ ನಟಿ ಅನುಷ್ಕಾಳ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.
ಉಡುಪಿ(ಮೇ.20): ಬಾಹುಬಲಿ ಸಿನಿಮಾದ ದೇವಸೇನ ಖ್ಯಾತಿಯ ಅನುಷ್ಕಾ ಶೆಟ್ಟಿ ಸಿನಿಮಾ ಯಶಸ್ವಿಯಾದ ಬಳಿಕ ಜಾಲಿ ಮೂಡ್ ನಲ್ಲಿದ್ದಾರೆ. ಸ್ನೇಹಿತರು, ಕುಟುಂಬದವರ ಜೊತೆಗೂಡಿ ಜಾಲಿ ಟ್ರಿಪ್ ಮಾಡ್ತಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಸಂಬಂಧಿರೊಬ್ಬರ ಗೃಹಪ್ರವೇಶ ಕಾರ್ಯಕ್ರಮದ ಹಿನ್ನೆಲೆ ಉಡುಪಿಗೆ ಆಗಮಿಸಿದ್ದರು.. ತಲ್ಲೂರು ಗ್ರಾಮದ ಜಗನಾಥ್ ಶೆಟ್ಟಿ ಎಂಬುವವರ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆ ಪಾಲ್ಗೊಂಡಿದ್ದರು.. ತಾಯಿ, ಸಹೋದರರ ಜೊತೆ ಆಗಮಿಸಿದ್ದ ಅನುಷ್ಕಾಳನ್ನ ನೋಡಲು ಅಭಿಮಾನಿಗಳು ಸಾಗರವೇ ಬಂದಿತ್ತು.. ಹಾಗೂ ತಮ್ಮ ನೆಚ್ಚಿನ ನಟಿ ಅನುಷ್ಕಾಳ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಬಳಿಕ ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ಬಾಹುಬಲಿ ಸಿನಿಮಾ ಯಶಸ್ವಿಯಾಗಿದಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ,ಸುವರ್ಣನ್ಯೂಸ್ ಜೊತೆ ಮಾತನಾಡಿದ ಅನುಷ್ಕಾ ಶೆಟ್ಟಿ, ಕನ್ನಡದಲ್ಲಿ ಅವಕಾಶ ಸಿಕ್ಕರೆ ಕಂಡಿತ ನಟಿಸುವುದಾಗಿ ತಿಳಿಸಿದ್ರು..
