ಒಂದಲ್ಲ ಒಂದು ಕಾರಣದಿಂದಾಗಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಭಾರತದಲ್ಲಿ ಸುದ್ದಿಯಲ್ಲಿರುತ್ತಾರೆ. ಭಾರತದಲ್ಲಿ ಮಾತ್ರ ನೋಡಿದರೆ ಈ ಅನುಷ್ಕಾ ಸಿಂಗಾಪುರದಲ್ಲಿಯೂ ಸುದ್ದಿಯಾಗುತ್ತಿದ್ದಾರೆ. ಏಕೆ?

ಫೋಟೋ ನೋಡಿ ತಕ್ಷಣ ಯಾರಪ್ಪ ಇದು, ಸೇಮ್ ಅನುಷ್ಕಾ ತರಾನೇ ಇದ್ದಾರೆ! ಅದರೆಲ್ಲೋ ಸೆಲ್ಫೀ ತಗೋತಿದ್ದಾರಲ್ಲಾವೆಂದು ಕನ್ಫೂಸ್ ಆಗೋ ಮಂದಿಗೆ ಇಲ್ಲಿದೆ ಕ್ಲಾರಿಫಿಕೇಷನ್.

ಎಲ್ಲ ಪ್ರಖ್ಯಾತ ಸೆಲೆಬ್ರಿಟಿಗಳ ವೆರೈಟಿ ಪೋಟೋ ಹಿಡಿದು, ಮೇಣದ ಪ್ರತಿಮೆ ಮಾಡುವುದರಲ್ಲಿ ಸಿಂಗಾಪುರ್‌ನ ಮೇಡಮ್ ಟುಸ್ಸಾಡ್ಸ್ ಎತ್ತಿದ ಕೈ. ಅದರಲ್ಲಿಯೂ ಭಾರತೀಯ ಗಣ್ಯರು ಹಾಗೂ ಬಾಲಿವುಡ್ ನಟರು ಇಲ್ಲಿ ಸ್ಥಾನ ಪಡೆದುಕೊಂಡಿದ್ದಾರೆಂಬುವುದು ಹೆಮ್ಮೆಯ ವಿಷಯ.

ಈ ಮ್ಯೂಸಿಯಂನಲ್ಲಿ ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಸಹ ಸ್ಥಾನ ಪಡೆದುಕೊಂಡಿದ್ದಾರೆ. ತಮ್ಮ ಮೇಣದ ಪ್ರತಿಮೆ ನೋಡಿ ಅನುಷ್ಕಾನೇ ಬೆರಗಾಗಿದ್ದಾರಂತೆ! ಮೊಬೈಲ್ ಹಿಡಿದು ಸೆಲ್ಫೀ ತೆಗೆದುಕೊಳ್ಳುತ್ತಿರುವ ಅನುಷ್ಕಾ ಪ್ರತಿಮೆ ಎಂಥವರನ್ನೂ ಬೆರಗುಗೊಳಿಸುವಂತಿದೆ. ನೋಡಿದಾಕ್ಷಣ ವಾವ್ ಸೂಪರ್...ಎಂದು ಮೂಗಿನ ಮೇಲೆ ಬೆರಳು ಇಡುತ್ತಿದ್ದಾರೆ ಮಂದಿ.

ಬೇರೆಯವರು ಇರಲಿ, ತಮ್ಮ ಪ್ರತಿಮೆಯನ್ನು ನೋಡಿದ ಅನುಷ್ಕಾ ಖುದ್ದು ಇದೇ ಎಕ್ಸ್‌ಪ್ರೆಷನ್ ತೋರಿದ್ದಾರೆ. ಅಷ್ಟೇ ಅಲ್ಲ, ಪ್ರತಿಮೆಯೊಂದಿಗೆ ರಿಯಲ್ ಅನುಷ್ಕಾ ಪೋಟೋ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ , ಕರೀನಾ, ಅಮಿತಾಭ್ ಬಚ್ಚನ್ ಹೀಗೆ ಅನೇಕ ಬಾಲಿವುಡ್ ಸ್ಟಾರ್ಳ ಪ್ರತಿಮೆ ಈ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿದೆ, ಈಗ ಅದೇ ಸಾಲಿನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನ ಮಡದಿ ಮಿಸ್ಸ್ ವಿರಾಟ್ ಸೇರಿದ್ದಾರೆ!

Scroll to load tweet…
Scroll to load tweet…