ಸ್ವಲ್ಪ ಖಾರವಾಗಿಯೇ ಸಂದರ್ಶನವೊಂದರಲ್ಲಿ ತಮ್ಮ ಅಸಮಾಧಾನ ತೋಡಿಕೊಂಡ ಅನುಷ್ಕಾ ಪ್ರಕಾರ ನಟಿಯರಿಗೆ ಜವಾಬ್ದಾರಿ ಹೆಚ್ಚು. ಸಿನಿಮಾ ಮತ್ತು ವೈಯುಕ್ತಿಕ ಬದುಕನ್ನು ಒಂದು ಹಳಿಯ ಮೇಲೆ ಸಾಗಿಸಿಕೊಂಡು ಹೋಗಬೇಕಾದದ್ದು ಅವರ ಬಹುಮುಖ್ಯ ಸವಾಲು. ಆದರೆ ನಮ್ಮಲ್ಲಿ ಹಲವರು ನಟಿಯರ ಬಗ್ಗೆ ಹೆಚ್ಚು ಟೀಕೆಗಳನ್ನೇ ಮಾಡುತ್ತಾ ಬಂದಿದ್ದಾರೆ. ಆದರೆ ನಮಗೆ ಇರುವ ಬ್ಯುಸಿ ಶೆಡ್ಯೂಲ್‌ಗಳಲ್ಲಿ ಈ ರೀತಿ ನಾನ್‌ಸೆನ್ಸ್ ಆಗಿ ನಡೆದುಕೊಳ್ಳಲು ಸಮಯವೇ ಸಿಕ್ಕುವುದಿಲ್ಲವಂತೆ.

ಅಲ್ಲದೇ ಕೆಲಸಕ್ಕೆ ಬದ್ಧತೆ ತೋರುವುದರಲ್ಲಿಯೇ ಹೆಚ್ಚು ಸಮಯ ಕಳೆಯುತ್ತೇನೆ. ನನ್ನ ಸಹ ನಟಿಯರು, ಇತರ ನಟಿಯರೂ ನನ್ನಂತೆಯೇ ಇರುತ್ತಾರೆ. ಹಾಗಾಗಿ ನನ್ನಂತೆಯೇ ಅವರೂ ಎಂದುಕೊಳ್ಳುತ್ತೇನೆ ಎನ್ನುವ ಅನುಷ್ಕಾಗೆ ಸಹೋದ್ಯೋಗಿ ನಟಿಯರ ಬಗ್ಗೆ ಇರುವ ಅಪಾರ ಪ್ರೀತಿಯನ್ನು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. 

ನಟಿಯರಿಗೆ ಜವಾಬ್ದಾರಿ ಹೆಚ್ಚು. ಸಿನಿಮಾ ಮತ್ತು ವೈಯುಕ್ತಿಕ ಬದುಕನ್ನು ಒಂದು ಹಳಿಯ ಮೇಲೆ ಸಾಗಿಸಿಕೊಂಡು ಹೋಗಬೇಕಾದದ್ದು ಅವರ ಬಹುಮುಖ್ಯ ಸವಾಲು - ಅನುಷ್ಕಾ