ರಿವೀಲಾಯ್ತು ಅನುಷ್ಕಾ 'ಪರಿ' ಚಿತ್ರದ ಫಸ್ಟ್ ಲುಕ್

First Published 11, Jan 2018, 5:22 PM IST
Anushka Sharma shares spooky teaser of Pari
Highlights

ಸದ್ಯ ಮದುವೆ ಸೆಲಬ್ರೆಷನ್ ಮೂಡಿನಿಂದ ಹೊರ ಬಂದಿರೋ ಅನುಷ್ಕಾ ಶರ್ಮ, ಮತ್ತೆ ಶೂಟಿಂಗ್'ಗೆ ವಾಪಸ್ಸಾಗಿದ್ದಾರೆ.

ಬೆಂಗಳೂರು (ಜ.11): ಸದ್ಯ ಮದುವೆ ಸೆಲಬ್ರೆಷನ್ ಮೂಡಿನಿಂದ ಹೊರ ಬಂದಿರೋ ಅನುಷ್ಕಾ ಶರ್ಮ, ಮತ್ತೆ ಶೂಟಿಂಗ್'ಗೆ ವಾಪಸ್ಸಾಗಿದ್ದಾರೆ.

ಈ ಗ್ಯಾಪ್'ನಲ್ಲಿ ನಟಿ ಅನುಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರ 'ಪರಿ'ಯ ಟೀಸರ್'ನ್ನು ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿಕೊಂಡಿದ್ದಾರೆ. ತಮ್ಮದೇ ನಿರ್ಮಾಣದ 'ಪರಿ' ಟೀಸರ್'ನಲ್ಲಿ ಅನುಷ್ಕಾ ಶೋಷಿತ ಹೆಣ್ಣೊಬ್ಬಳು ಪ್ರತೀಕಾರಕ್ಕಾಗಿ ಕಾದು ನಿಂತಂತೆ ಕಾಣಿಸುವ ವೀಡಿಯೋ ಇದೆ. ಈ ಚಿತ್ರ ಇದೇ ಮಾರ್ಚ್ 2 ರಂದು ಬಿಡುಗಡೆಯಾಗಲಿದೆ. ಅನುಷ್ಕಾ ಟೀಸರ್'ನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು  'ಪರಿಯ ಜತೆ ಈ ಬಾರಿ ಹೋಲಿ ಆಚರಣೆ' ಎಂದೂ ಬರೆದುಕೊಂಡಿದ್ದಾರೆ.

ಪರಿ ಚಿತ್ರವನ್ನು ಬಂಗಾಳಿ ಮೂಲದ ಪ್ರಾಸಿಟ್'ರಾಯ್ ನಿರ್ದೇಶನ ಮಾಡಿದ್ದು,  ಬೆಂಗಾಲಿ ಕಲಾವಿದ ಪರಮ್ರತಾ ಚಟರ್ಜಿ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.ರಬ್ ನೆ ಬನಾದಿ ಜೋಡಿ', 'ಕಹಾನಿ'ಯಂತಹಾ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಅನುಷ್ಕಾ ಅವರ 'ಪರಿ' ಸಹ ಸಾಕಷ್ಟು ಕುತೂಹಲ ಮೂಡಿಸಿದೆ.

 

 

loader