ಫಿಲ್ಮ್ ಬ್ಯಾಗ್ರೌಂಡ್ , ಥಿಯೇಟರ್ ಬ್ಯಾಗ್ರೌಂಡ್ ನಿಂದ ಸಿನಿಮಾಗೆ ಬರೋದು ಎಲ್ಲವೂ ಕಾಮನ್ ಆದರೆ ಪೊಲೀಸ್ ಬ್ಯಾಗ್ರೌಂಡ್ ಯಿಂದ ಸಿನಿಮಾ ಕಡೆ ಬಂದವರು ಬಹಳ ಕಡಿಮೆ. ಯಾರು ಆ ನಟ ಇಲ್ಲಿದೆ ನೋಡಿ

ಕಲರ್ಸ್ ಕನ್ನಡ ಖ್ಯಾತ ಧಾರಾವಾಹಿ ‘ಯಶೋಧೆ’ ಮೂಲಕ ಜನರ ಮನಸ್ಸಿಗೆ ಹತ್ತಿರವಾದವರು ಕಾರ್ತಿಕ್ ಆತ್ತಾವರ. ‘ಅನುಕ್ತ ’ ಚಿತ್ರದ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಮೂಲತಃ ಮಂಗಳೂರಿನವರಾದ ಕಾರ್ತಿಕ್ ಅತ್ತಾವರ ತಂದೆ ಕೃಷ್ಣ ಅತ್ತಾವರ ಕೊಟ್ಟಾರದ ಲೋಕಾಯುಕ್ತ ವೃತ್ತಿಯಲ್ಲಿದ್ದವರು. ಆ ನಂತರ ಪ್ರಮೋಶನ್ ಬಳಿಕ ಸಬ್ ಇನ್ಸ್ಪೆಕ್ಟರ್ ಆಗಿದ್ದು ಸದ್ಯಕ್ಕೆ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

’ವೀಕೆಂಡ್ ವಿತ್ ರಮೇಶ್’ ಮೊದಲ ಗೆಸ್ಟ್ ಯಾರು ಗೊತ್ತಾ?

ಕಾರ್ತಿಕ್ ಕನ್ನಡ ಚಿತ್ರರಂಗಕ್ಕಿಂತ ಮೊದಲು ಸಿನಿ ಜರ್ನಿ ಶುರುಮಾಡಿದ್ದು ತುಳುವಿನ ‘ರಿಕ್ಷಾ ಡ್ರೈವರ್’ ಚಿತ್ರದ ಮೂಲಕ. ಆನಂತರ ‘ಅನುಕ್ತ’ ಚಿತ್ರದಲ್ಲಿ ಅವಕಾಶ ಒಲಿದು ಬಂದಿತ್ತು. ಅಷ್ಟೇ ಅಲ್ಲದೆ ರಿಕ್ಷಾ ಡ್ರೈವರ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ತಂದೆಯಂತೆ ಖಡಕ್ ಅಧಿಕಾರಿ ಆಗಲು ಸಾಧ್ಯವಾಗದಿದ್ದರೂ ‘ಅನುಕ್ತ’ ಚಿತ್ರದಲ್ಲಿ ಪೊಲೀಸ್ ತನಿಖಾಕಾಧಿಕಾರಿಯಾಗಿ ಪಾತ್ರ ನಿರ್ವಹಿಸಿದವರು ಕಾರ್ತಿಕ್ ಅತ್ತಾವರ್.