ಆಗಸ್ಟ್ 15 ರಂದು ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಇದೀಗ ಮೂರು ತಿಂಗಳ ಮಗಳೊಂದಿ ದೀಪಾವಳಿ ಹಬ್ಬ ಆಚರಿಸಿಕೊಂಡಿದ್ದಾರೆ.
ಪ್ರತಿ ಸಲವೂ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದ ಅನು ಪ್ರಭಾಕರ್ ಮುಖರ್ಜಿ ದಂಪತಿ ಈ ಸಲ ಸ್ವಲ್ಪ ಸ್ಪೆಷಲ್ ಆಗಿದೆ. ಯಾಕೆಂದರೆ ಅವರು ಮುದ್ದು ಮಗಳ ಮೊದಲ ದೀಪಾವಳಿ ಇದಾಗಿದೆ.
ಮೂರು ತಿಂಗಳು ಮಗಳೂಂದಿಗೆ ತಾವು ಹಬ್ಬ ಆಚರಿಸುತ್ತಿರುವುದಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ರಘು ಮುಖರ್ಜಿ ಹಂಚಿಕೊಂಡಿದ್ದಾರೆ.
'ಈ ವರ್ಷ ನಮ್ಮ ದೀಪಾವಳಿ ಬಹಳ ವಿಶೇಷ... ನಮ್ಮ ಮಗಳು ಹಾಗು ನಮ್ಮ ಪರವಾಗಿ ನಿಮ್ಮೆಲ್ಲರಿಗೂ ಹಬ್ಬದ ಹಾರ್ದಿಕ ಶುಭಾಶಯಗಳು' ಎಂದು ಫೇಸ್ ಬುಕ್ ಪೋಸ್ಟ್ ಹಾಕಿಕೊಂಡಿದ್ದಾರೆ.
Scroll to load tweet…
