ಮುಂಬೈ(ಸೆ.29): ಹಿಂದಿ ಕಿರುತೆರೆಯಲ್ಲಿ ಹೊಸೊಂದು ಯುಗವನ್ನೇ ಆರಂಭಿಸಿದ್ದ 'ಕಪಿಲ್ ಶರ್ಮಾ ಶೋ' ಇಂದು ಭಾರತದ ಆಚೆಗೂ ಇರುವ ಭಾರತೀಯರ ಮನ ಗೆದ್ದಿದೆ ಎಂದರೆ ತಪ್ಪಾಗುವುದಿಲ್ಲ.

ಬಾಲಿವುಡ್ ತಾರೆಗಳಿಂದ ಹಿಡಿದು, ರಾಜಕೀಯ ನಾಯಕರು, ಖ್ಯಾತ ಕ್ರೀಡಾಪಟುಗಳು ಕಪಿಲ್ ಶರ್ಮಾ ನಡೆಸಿಕೊಡುವ 'ದಿ ಕಪಿಲ್ ಶರ್ಮಾ ಶೋ' ದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಸದ್ಯ ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರ ಅಣ್ಣಾ ಹಜಾರೆ ಕಾಣಿಸಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳನ್ನು ಕಪಿಲ್ ಶರ್ಮ ಕಾಲೆಳೆಯುವುದು ಸಾಮಾನ್ಯ ಆದರೆ ಈ ಬಾರಿ ಶರ್ಮಾರ ಕಾಲು ಎಳೆದಿದ್ದಾರೆ ಹಿರಿಯ ಹೋರಾಟಗಾರ ಅಣ್ಣ ಹಜಾರೆ. ಅದರ ಒಂದು ಸಣ್ಣ ಜಲಕ್ ಇಲ್ಲಿದೆ ನೋಡಿ....