ಚಿಕಿತ್ಸೆಗೆಂದು ಲಂಡನ್ ಗೆ ತೆರಳಿರುವ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿಕೊಂಡಿದ್ದಾರೆ. ಅಲ್ಲಿಂದಲೇ ಫೇಸ್ ಬುಕ್ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. 

ಕ್ರಿಕೆಟಿಗ ಅನಿಲ್ ಕುಂಬ್ಳೆ ಲಂಡನ್ ನಲ್ಲಿ ಶಿವಣ್ಣರನ್ನು ಭೇಟಿ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ಶಿವಣ್ಣ ಫ್ಯಾಮಿಲಿ ಜೊತೆ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಫೋಟೋವನ್ನು ಶಿವಣ್ಣ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಕ್ರಿಕೆಟ್ ಅಂದ್ರೆ ನನಗೆ ಇಷ್ಟ, ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ surpriseಆಗಿ ಸಿಕ್ಕ ನನ್ನ favourite player ನನ್ನ ಒಳ್ಳೆಯ ಸ್ನೇಹಿತ Anil Kumble ನಿಮ್ಮ ಭೇಟಿ ಖುಷಿ ಕೊಡ್ತು ಎಂದು ಬರೆದುಕೊಂಡಿದ್ದಾರೆ. 

 

ಸದ್ಯ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ನಡೆಯುತ್ತಿದ್ದು ಅನಿಲ್ ಕುಂಬ್ಳೆ ಅಲ್ಲಿಗೆ ಹೋಗಿದ್ದಾರೆ. ಶಿವಣ್ಣರನ್ನು ಭೇಟಿ ಮಾಡಿ ಬರ್ತಡೇ ವಿಶ್ ಮಾಡಿದ್ದಾರೆ.