ಏಂಜಲಿನಾ ಇದೀಗ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಜೊತೆ ರಹಸ್ಯವಾಗಿ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಲಾಸ್‌ ಏಂಜಲೀಸ್‌: ಹಾಲಿವುಡ್‌ನ ಖ್ಯಾತ ಜೋಡಿ ಬ್ರಾಡ್‌ ಪಿಟ್‌ ಮತ್ತು ಏಂಜಲಿನಾ ಜೋಲಿ ವಿಚ್ಛೇದನ ಪಡೆಯಲು ಮುಂದಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಏಂಜಲಿನಾ ಇದೀಗ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಜೊತೆ ರಹಸ್ಯವಾಗಿ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಏಂಜಲೀನಾ ಮತ್ತು ಬ್ರಾಡ್‌ 2016ರಲ್ಲಿ ಬೇರೆ ಬೇರೆಯಾಗಿದ್ದರು.

ಇಬ್ಬರ ಮಧ್ಯೆ ಒಮ್ಮತ ಮೂಡದೇ ಇರುವ ಕಾರಣಕ್ಕಾಗಿ ವಿಚ್ಛೇದನ ಪಡೆಯಲು ಈ ಜೋಡಿ ಮುಂದಾಗಿದೆ. ಈ ಮಧ್ಯೆ ಏಂಜಲಿನಾ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದು, ಆತನ ಜೊತೆ ಏಂಜಲಿನಾ ಡೇಟಿಂಗ್‌ನಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.