ಇತ್ತೀಚೆಗಷ್ಟೇ ಲಾಸ್ ಏಂಜೆಲೆಸ್'ನ ಸ್ಟುಡಿಯೋವೊಂದರಲ್ಲಿ ಹಾಡಿನ ರೆಕಾರ್ಡಿಂಗ್ ಮುಗಿಸಿರುವ ರಸೆಲ್, ತಮ್ಮ ಮ್ಯೂಸಿಕ್ ಆಲ್ಬಂನಲ್ಲಿ ನಟಿಸಲು ದೀಪಿಕಾ ಪಡುಕೋಣೆ ಇಲ್ಲವೇ ಪ್ರಿಯಾಂಕ ಚೋಪ್ರಾ ಅವರನ್ನು ಕೇಳುವುದಾಗಿ ಹೇಳಿದ್ದಾರೆ.

ನವದೆಹಲಿ(ಏ.15): ಉದ್ದೀಪನಾ ಮದ್ದು ಸೇವಿಸಿ ಐಸಿಸಿಯಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ವೆಸ್ಟ್ ಇಂಡೀಸ್ ಆಲ್ರೌಂಡರ್ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದಾರೆ.

ಸಹ ಆಟಗಾರ ಡ್ವೇನ್ ಬ್ರಾವೋ ಹಾದಿ ತುಳಿದಿರುವ ರಸೆಲ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಲಾಸ್ ಏಂಜೆಲೆಸ್'ನ ಸ್ಟುಡಿಯೋವೊಂದರಲ್ಲಿ ಹಾಡಿನ ರೆಕಾರ್ಡಿಂಗ್ ಮುಗಿಸಿರುವ ರಸೆಲ್, ತಮ್ಮ ಮ್ಯೂಸಿಕ್ ಆಲ್ಬಂನಲ್ಲಿ ನಟಿಸಲು ದೀಪಿಕಾ ಪಡುಕೋಣೆ ಇಲ್ಲವೇ ಪ್ರಿಯಾಂಕ ಚೋಪ್ರಾ ಅವರನ್ನು ಕೇಳುವುದಾಗಿ ಹೇಳಿದ್ದಾರೆ.

ತಮ್ಮ ಹೊಸ ಯೋಜನೆ ಕುರಿತು ಮಾತನಾಡಿರುವ ಅವರು, "ಸದ್ಯ ನಾನು ಕ್ರಿಕೆಟ್ ಆಡುತ್ತಿಲ್ಲ. ಹೀಗಾಗಿ ನನ್ನ ಸಮಯ ಹಾಗೂ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಡ್ವೇನ್ ಬ್ರಾವೋ ನನಗೆ ಸಂಗೀತ ಪಾಠ ಮಾಡುತ್ತಿದ್ದಾರೆ ಎಂದು ರಸೆಲ್ ಹೇಳಿದ್ದಾರೆ.