ಕಿರುತೆರೆಯ ಖ್ಯಾತ, ಬಹು ಬೇಡಿಕೆಯ ನಿರೂಪಕಿ ಅನುಶ್ರೀಗೂ ಒಬ್ಬ ಫೇವರೆಟ್ ಅ್ಯಂಕರ್ ಇದ್ದಾರಂತೆ! ಅದನ್ನು ಅವರೇ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ, ಯಾರದು? ಇಲ್ಲಿದೆ ನೋಡಿ...

ಮಾತಿನ ಮಲ್ಲಿ ಅನುಶ್ರೀ

ಕನ್ನಡದ ಕಿರುತೆರೆಯಲ್ಲಿ ಇದ್ದವರೆಲ್ಲಾ ಅ್ಯಂಕರ್ ಅಂದ್ರೆ ಅನುಶ್ರೀ, ಅನುಶ್ರೀ ಅಂದ್ರೇನೆ ಅ್ಯಂಕರ್ ಎನ್ನುವಷ್ಟು ಮಟ್ಟಿಗೆ ಫೇಮಸ್. ಅರಳು ಹುರಿದಂಥ ಮಾತು, ಟ್ಯಾಲೆಂಟ್, ಸೂಪರ್ ಲುಕ್... ಎಲ್ಲರಿಗೂ ಫೇವರೆಟ್ ಈ ಮಂಗಳೂರು ಬೆಡಗಿ. ಕಾರ್ಯಕ್ರಮ ಚಂದ ಇಲ್ಲದಿದ್ರೆ ಏನು ಅನುಶ್ರೀಗೊಸ್ಕರನಾದ್ರೂ ನೋಡ್ತೀವಿ ಅಂತಾರೆ ಮಂದಿ. ಈ ಚೆಲುವೆಗೂ ಒಬ್ಬ ಫೇವರೆಟ್ ಆ್ಯಂಕರ್ ಇದ್ದಾರೆ ಗೊತ್ತಾ?

 

ಹೌದು. ಕನ್ನಡ ಕಿರುತೆರೆಯ ಟಾಕಿಂಗ್ ಟಾಮ್ ಅಕುಲ್ ಬಾಲಾಜಿ ಕಂಡರೆ ಅನುಶ್ರೀಗೆ ಸಿಕ್ಕಾಪಟ್ಟೆ ಇಷ್ಟವಂತೆ. ಅನುಶ್ರೀ ಕೆಲವು ದಿನಗಳ ಹಿಂದೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆಂದಾಗ, ಅಭಿಮಾನಿಯೊಬ್ಬ ನಿಮಗೆ ಯಾವ ಅ್ಯಂಕರ್ ಇಷ್ಟವೆಂದು ಕೇಳಿದ್ದಕ್ಕೆ ಈ ರೀತಿ ಉತ್ತರಿಸಿದ್ದಾರೆ.

ಇದು ಮಾತಿನ ಮಲ್ಲಿ ಅನುಶ್ರೀ ಆ್ಯಂಕರಿಂಗ್ ಪಾಠ

ಒಂದು ಶೋ ಯಶಸ್ವಿಯಾಗಬೇಕೆಂದರೆ ಅದರಲ್ಲಿ ನಿರೂಪಕರದ್ದು ಬಹುದೊಡ್ಡ ಪಾಲಿರುತ್ತದೆ. ಅವರ ಎನರ್ಜಿ ಸಾಕು ಇಡೀ ಸೆಟ್ ಸೂಪರ್ ಆಗಿರುತ್ತದೆ.