’ಮಹಾದೇವಿ’ ಧಾರಾವಾಹಿಯ ಶ್ರೀದತ್ತ ಸ್ಲಂ ಮಕ್ಕಳಿಗೆ ಟೀಚರ್!
‘ಮಹಾದೇವಿ’ ಜೀ ಕನ್ನಡದ ಫೇಮಸ್ ಧಾರಾವಾಹಿಗಳಲ್ಲೊಂದು. ಹೊಸ ಕಥೆ, ಹೊಸ ರೂಪದೊಂದಿಗೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಹಿರಣ್ಮಯಿ ತಂದೆಯಾಗಿ ನಟಿಸಿದ ಶ್ರೀದತ್ತಾ ಜೊತೆ ವಿಶೇಷ ಸಂದರ್ಶನ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವಿಭಿನ್ನ ಕಥಾಹಂದರವುಳ್ಳ ಪೌರಾಣಿಕ ಧಾರಾವಾಹಿ ಮಹಾದೇವಿ. ಒಳ್ಳೆಯ ಕಥೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟಿದೆ. ಈ ಧಾರಾವಾಹಿ ಹೊಸ ರೂಪದೊಂದಿಗೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹಿರಣ್ಮಯಿ ಬೆಳೆದು ದೊಡ್ಡವಳಾಗಿದ್ದಾಳೆ. ಇದರೊಂದಿಗೆ ಕಥೆ ಹಾಗೂ ಪಾತ್ರಗಳು ಹೊಸ ತಿರುವು ಪಡೆದುಕೊಂಡಿದೆ. ಹಿರಣ್ಮಯಿ ತಂದೆಯಾಗಿ ನಟಿಸಿದ್ದ ಶ್ರೀದತ್ತ ಸುವರ್ಣ ನ್ಯೂಸ್. ಕಾಂ ಜೊತೆ ಮಾತನಾಡಿದ್ದಾರೆ.
ಮಹಾದೇವಿ ನಂತರ ಯಾವ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದೀರಾ?
ಸದ್ಯಕ್ಕೆ ’ದ ಡೈರಕ್ಟರ್’ ಎನ್ನುವ ಸಿನಿಮಾದಲ್ಲಿ ಲೀಡಿಂಗ್ ರೋಲ್ ಮಾಡ್ತಾ ಇದೀನಿ. ಜೊತೆಗೆ ದಿಗಂತ್ ಜೊತೆ ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾದಲ್ಲಿ ಲೀಡಿಂಗ್ ರೋಲ್ ನಲ್ಲಿ ನಟಿಸಿದ್ದೇನೆ. ಸದ್ಯಕ್ಕೆ ಯಾವುದೇ ಸೀರಿಯಲ್ ನಲ್ಲಿ ನಟಿಸ್ತಾ ಇಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ಮಾಡ್ತೀನಿ.
ಮಹಾದೇವಿ ಸೀರಿಯಲ್ ರೆಸ್ಪಾಂಡ್ ಹೇಗಿದೆ?
ತುಂಬಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲಿ ಹೋದ್ರೂ ಜನ ಗುರುತು ಹಿಡಿಯುತ್ತಿದ್ದಾರೆ. ಅದೇ ಖುಷಿ.
ಇದಕ್ಕೂ ಮೊದಲು ಏನ್ ಮಾಡ್ತಾ ಇದ್ರಿ?
ನಾನು ಮೂಲತಃ ರಂಗಭೂಮಿ ಕಲಾವಿದ. ಅಸಿಸ್ಟೆಂಟ್ ಡೈರಕ್ಟರ್ ಆಗಿ ಕೆಲಸ ಮಾಡಿದೀನಿ. ಅಲ್ಲಿಂದ ಕಿರುತೆರೆಗೆ ಬಂದೆ. ‘ಮಹಾದೇವಿ’ ನನ್ನ ಮೊದಲ ಸೀರಿಯಲ್.
ಮೊದಲ ಬಾರಿ ಕ್ಯಾಮೆರಾ ಫೇಸ್ ಮಾಡಿದ್ದು ಹೇಗಿತ್ತು?
ಮೊದಲು ಸ್ವಲ್ಪ ಭಯ ಇತ್ತು. ದೊಡ್ಡ ದೊಡ್ಡ ಡೈರಕ್ಟರ್ ಗಳು, ಕಲಾವಿದರ ಜೊತೆ ಕೆಲಸ ಮಾಡಬೇಕು ಅಂತ ಬಂದಾಗ ಸ್ವಲ್ಪ ಅಳುಕಿತ್ತು. ಡೈಲಾಗನ್ನು ಆನ್ ಸ್ಪಾಟ್ ಹೇಳಬೇಕಿತ್ತು. ಮೊದ ಮೊದಲು ಕಷ್ಟವಾಗೋದು. ಆಮೇಲೆ ಅಭ್ಯಾಸ ಆಯ್ತು.
ಶಾರ್ಟ್ ಮೂವಿಗಳನ್ನು ಮಾಡ್ತಾ ಇದೀರಾ?
ಬಹಳಷ್ಟು ಮಾಡಿದೀನಿ. ಇತ್ತೀಚಿಗೆ ಮಾಡಿಲ್ಲ. ಒಳ್ಳೆಯ ಕ್ಯಾರೆಕ್ಟರ್ ಬಂದ್ರೆ ಮಾಡುವ ಯೋಚನೆ ಇದೆ.
ಇದನ್ನು ಹೊರತುಪಡಿಸಿ ಏನ್ ಮಾಡ್ತೀರಿ ?
ನಾಟಕಗಳನ್ನು ಮಾಡ್ತೀನಿ. ಮಾಡಿಸ್ತೀನಿ. ಈ ಸಲ ಸ್ಲಂ ಮಕ್ಕಳನ್ನೆಲ್ಲಾ ಸೇರಿಸಿಕೊಂಡು ನಾಟಕ ಮಾಡ್ಸಿದೀನಿ. ’ಸಮುದಾಯ ಕರ್ನಾಟಕ‘ ಅಂತ ಒಂದು ಗ್ರೂಪ್ ಇದೆ. ಅವರ ಸಹಯೋಗದಲ್ಲಿ ನಾಟಕಗಳನ್ನು ನಿರ್ದೇಶನ ಮಾಡ್ತೀನಿ.
ಸಿನಿಮಾ ಮಾಡುವ ಪ್ಲಾನ್ ಇದೆಯಾ?
ನನ್ನ ಗುರಿಯೇ ಸಿನಿಮಾ ಮಾಡೋದು. ನಾನೊಬ್ಬ ನಟ. ಯಾವುದೇ ಒಳ್ಳೆಯ ಪಾತ್ರ ಸಿಕ್ಕಿದರೂ ಮಾಡೋಕೆ ರೆಡಿ ಇದೀನಿ.
ನೀವು ಕಂಡಂತೆ ಸಿನಿಮಾ ಇಂಡಸ್ಟ್ರಿ....
ಪ್ರತಿಭೆ ಖಂಡಿತಾ ಬೆಳೆಯಬಹುದು. ಬೆಳೆಯಲು ಸಪೋರ್ಟ್ ಮಾಡುತ್ತದೆ. ಒಂದಷ್ಟು ಹೋಂ ವರ್ಕ್ ಮಾಡಬೇಕು. ಕಷ್ಟಪಟ್ಟು ಕೆಲಸ ಮಾಡಿದರೆ ಇಲ್ಲಿ ಉಳಿಯಬಹುದು. ನನಗೆ ನನ್ನ ಕೆಲಸ ತೃಪ್ತಿ ಕೊಟ್ಟಿದೆ.
ನೀವು ನೆನೆಪಿಸಿಕೊಳ್ಳಬಹುದಾದ ಒಂದು ಘಟನೆ ಹೇಳಬಹುದಾ?
ಸೀರಿಯಲ್ ಟೆಲಿಕ್ಯಾಸ್ಟ್ ಆದ ದಿನ ನಮ್ಮ ಡೈರಕ್ಟರ್ ಚೆನ್ನಾಗಿ ಮಾಡ್ತಾ ಇದೀಯಾ ಕಣೋ ಅಂತ ಬೆನ್ನು ತಟ್ಟಿದರು. ಅದು ತುಂಬಾ ಖುಷಿ ಕೊಟ್ತು. ಜನ ನೋಡಿ ಗುರುತಿಸಿದಾಗ ಖುಷಿಯಾಗ್ತಾ ಇತ್ತು.
ಯಾರಿಗೆ ಥ್ಯಾಂಕ್ಸ್ ಹೇಳಲು ಇಷ್ಟಪಡ್ತೀರಿ?
ನನಗೆ ಇಂತದ್ದೊಂದು ಅವಕಾಶ ಕೊಟ್ಟಿದ್ದಕ್ಕೆ ರಮೇಶ್ ಇಂದಿರಾ ಹಾಗೂ ಶೃತಿ ನಾಯ್ಡುಗೆ ಥ್ಯಾಂಕ್ಸ್ ಹೇಳು ಇಷ್ಟಪಡ್ತೀನಿ. ನನ್ನ ಫ್ಯಾಮಿಲಿಗೆ, ಫ್ರೆಂಡ್ಸ್ ಗೆ, ಸಪೋರ್ಟ್ ಮಾಡ್ತಾ ಇರುವವರಿಗೆ ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀನಿ.
- ಶ್ರೀಲಕ್ಷ್ಮೀ ಎಚ್ ಎಲ್