ಕನ್ನಡದ ಬಹುವೆಚ್ಚದ ಸಿನಿಮಾ 'ವಿಲನ್' ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್'ಗಳೇ ಇದ್ದಾರೆ. ಆ ಸ್ಟಾರ್'ಗಳಲ್ಲಿ ಹ್ಯಾಟ್ರಿಕ್  ಹೀರೋ ಶಿವಣ್ಣ, ಕಿಚ್ಚ ಸುದೀಪ್ ಇದ್ದಾರೆ. ಇವರಿಬ್ಬರಲ್ಲಿ ವಿಲನ್ ಯಾರು ಅನ್ನೋದೇ ಕುತೂಹಲ.  ನಿರ್ದೇಶಕ ಜೋಗಿ ಪ್ರೇಮ್ ಹುಟ್ಟು ಹಾಕಿರೋ ಈ ಕುತೂಹಲಕ್ಕೆ ಸ್ವತಃ ಅವರೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಇದೀಗ ಹೊಸದೊಂದು ಗುಟ್ಟು ರಟ್ಟಾಗಿದೆ.

ಬೆಂಗಳೂರು (ನ.15): ಕನ್ನಡದ ಬಹುವೆಚ್ಚದ ಸಿನಿಮಾ 'ವಿಲನ್' ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್'ಗಳೇ ಇದ್ದಾರೆ. ಆ ಸ್ಟಾರ್'ಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ, ಕಿಚ್ಚ ಸುದೀಪ್ ಇದ್ದಾರೆ. ಇವರಿಬ್ಬರಲ್ಲಿ ವಿಲನ್ ಯಾರು ಅನ್ನೋದೇ ಕುತೂಹಲ. ನಿರ್ದೇಶಕ ಜೋಗಿ ಪ್ರೇಮ್ ಹುಟ್ಟು ಹಾಕಿರೋ ಈ ಕುತೂಹಲಕ್ಕೆ ಸ್ವತಃ ಅವರೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಇದೀಗ ಹೊಸದೊಂದು ಗುಟ್ಟು ರಟ್ಟಾಗಿದೆ.

ವಿಲನ್ ಚಿತ್ರದ ಮತ್ತೊಂದು ಆಕರ್ಷಣೆ ಆ್ಯಮಿ ಜಾಕ್ಸನ್. ಸದ್ಯಕ್ಕೆ ವಿಲನ್ ಚಿತ್ರಕ್ಕೆ ಆ್ಯಮಿನೇ ಈಗ ವಿಲನ್ ಆಗಿದ್ದಾರೆ. ಅದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಇಷ್ಟೆ. ಆ್ಯಮಿ ಜಾಕ್ಸನ್ ಸದ್ಯ ಬಿಜಿಯೆಸ್ಟ್ ನಟಿ. ಕನ್ನಡದ ವಿಲನ್ ಚಿತ್ರಕ್ಕೆ ಸೆಂಟರ್ ಆಫ್ ಅಟ್ರ್ಯಾಕ್ಷನ್. ಈ ಬೆಡಗಿಯನ್ನು ಹಾಕಿಕೊಂಡೇ ಜೋಗಿ ಪ್ರೇಮ್ ಈಗಾಗಲೇ ಹಲವು ದೃಶ್ಯಗಳನ್ನ ತೆಗೆದಿದ್ದಾರೆ. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ. ಯಾಕಂದರೆ ಆ್ಯಮಿ ಜಾಕ್ಸನ್'ಗೆ ವೀಸಾ ಪ್ರಾಬ್ಲಂ ಆಗಿದೆ. ಭಾರತಕ್ಕೆ ಬರೋದೇ ಕಷ್ಟವಾಗಿದೆ. ಅಲ್ಲಿಗೆ ವಿಲನ್ ಚಿತ್ರದ ಬಾಕಿ ಶೂಟಿಂಗ್ ಬ್ಯಾಲೆನ್ಸ್ ಇದೆ. ಆ್ಯಮಿ ಬರದೇ ಇದ್ದರೇ ಶೂಟಿಂಗ್ ನಡೆಯೋದಾದರೂ ಹೇಗೆ.? ಒಂದು ಅರ್ಥದಲ್ಲಿ ಆ್ಯಮಿನೇ ಸದ್ಯಕ್ಕೆ ವಿಲನ್ ಆಗಿದ್ದಾರೆ.