ಮಾಂಗಲ್ಯಧಾರಣೆಗು ಮುನ್ನ ಮಧುವಣಗಿತ್ತಿಯನ್ನು ವಿಶೇಷ ಪಲ್ಲಕ್ಕಿ ಮೂಲಕ ಕರೆತರಲಾಯಿತು. ನಂತರ ಮಂಟಪಕ್ಕೆ ಕರೆತಂದು ವಧು-ವರರಿಬ್ಬರಿಗೂ ಅಂತರಪಟಶಾಸ್ತ್ರ ನೆರವೇರಿಸಲಾಯಿತು. ಎಳ್ಳು-ಜೀರಿಗೆ ಶಾಸ್ತ್ರ ಪೂರ್ಣಗೊಂಡು ಅಂತರಪಟ ಸರಿದ ನಂತರ, ವಧು ಅಮೂಲ್ಯಳನ್ನು ಅಣ್ಣ ದೀಪಕ್ ಮತ್ತು ದಂಪತಿ ಧಾರೆಎರೆದು ಕನ್ಯಾದಾನ ಮಾಡಿದರು.
ಆದಿಚುಂಚನಗಿರಿ(ಮೇ.12): ಚಿತ್ತಾರದ ಚೆಲುವೆ ಐಸೂ ತನ್ನಿಷ್ಟದಂತೆ ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟರು. ಇಂದು ಮಧ್ಯಾಹ್ನ 12.30 ರ ಶುಭ ಅಭಿಜಿನ್ ಲಗ್ನದಲ್ಲಿ , ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಗುರು-ಹಿರಿಯರ ಆಶೀರ್ವಾದದೊಂದಿಗೆ ಅಮೂಲ್ಯ-ಜಗದೀಶ್ ಅಗ್ನಿಸಾಕ್ಷಿಯಾಗಿ ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಮಾಂಗಲ್ಯಧಾರಣೆಗು ಮುನ್ನ ಮಧುವಣಗಿತ್ತಿಯನ್ನು ವಿಶೇಷ ಪಲ್ಲಕ್ಕಿ ಮೂಲಕ ಕರೆತರಲಾಯಿತು. ನಂತರ ಮಂಟಪಕ್ಕೆ ಕರೆತಂದು ವಧು-ವರರಿಬ್ಬರಿಗೂ ಅಂತರಪಟಶಾಸ್ತ್ರ ನೆರವೇರಿಸಲಾಯಿತು. ಎಳ್ಳು-ಜೀರಿಗೆ ಶಾಸ್ತ್ರ ಪೂರ್ಣಗೊಂಡು ಅಂತರಪಟ ಸರಿದ ನಂತರ, ವಧು ಅಮೂಲ್ಯಳನ್ನು ಅಣ್ಣ ದೀಪಕ್ ಮತ್ತು ದಂಪತಿ ಧಾರೆಎರೆದು ಕನ್ಯಾದಾನ ಮಾಡಿದರು.
ಮಾಂಗಲ್ಯಧಾರಣೆ ನಂತರ ನವಜೋಡಿಗೆ ನಿರ್ಮಲಾನಂದ ಸ್ವಾಮಿಗಳು ಶಾಲು ಹೊದಿಸಿ ಆಶೀರ್ವದಿಸಿದರು. ಬಂಧು-ಬಳಗ, ಸ್ನೇಹಿತರು, ಕುಟುಂಬಸ್ಥರು ಮಾತ್ರವಲ್ಲ ಅಮೂಲ್ಯ ಅಭಿಮಾನಿಗಳು ಕೂಡ ನವವಧುವರರಿಗೆ ಹರಸಿ ಶುಭಕೋರಿದರು. ನಟ ಗಣೇಶ್ ದಂಪತಿ, ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಹಿರಿಯ ನಟ ಅಂಬರೀಷ್ ಸೇರಿದಂತೆ ಹಲವಾರು ಗಣ್ಯರು ಅಮ್ಮೂ ಕಲ್ಯಾಣಕ್ಕೆ ಸಾಕ್ಷಿಯಾದರು.
ಭರ್ಜರಿ ಭೋಜನ
ಮಾಂಗಲ್ಯಧಾರಣೆ ನಂತರ ಹಿರಿಯರ ಆಶೀರ್ವಾದ ಪಡೆಯುವ ವೇಳೆ ತವರನ್ನು ನೋಡಿ ಅಮ್ಮು ಕಣ್ಣಲ್ಲಿ ಕಂಬನಿ ಹರಿಯಿತು. ಸಿಂಪಲ್ ಮದುವೆ, ಅರ್ಥಪೂರ್ಣ ವಿವಾಹದ ಕನಸುಹೊತ್ತಿದ್ದ ಅಮ್ಮು, ಆಸೆ ಪಟ್ಟಂತೆ ಮಾವಿನ ಸಸಿ ನೆಟ್ಟು, ಪರಿಸರ ಜಾಗೃತಿ ಮೂಡಿಸುವ ಮೂಲಕ ತನ್ನ ವಿವಾಹವನ್ನು ಅರ್ಥಪೂರ್ಣಗೊಳಿಸಿದರು.
ವಿವಾಹದಲ್ಲಿ ಭೋಜನ ಭರ್ಜರಿಯಾಗಿಯೇ ತಯಾರಾಗಿತ್ತು. ಅಕ್ಕಿ ರೊಟ್ಟಿ, ಒಬ್ಬಟ್ಟು, ತರಹೇವಾರಿ ಪಲ್ಯಗಳು ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಉಣಬಡಿಸಲಾಯ್ತು. ಒಟ್ಟಿನಲ್ಲಿ ಅಮ್ಮು-ಜಗ್ಗಿ ಕಲ್ಯಾಣ ಕಾಲಭೈರವನ ಕ್ಷೇತ್ರದಲ್ಲಿ ಸುಸೂತ್ರವಾಗಿ ನೆರವೇರಿತು.