ಮುಂಬೈ(ಅ.11): ಬಾಲಿವುಡ್ ಬಾದ್'ಷಹ ಅಮಿತಾಬ್ ಬಚ್ಚನ್'ಗೆ ಇಂದು 74 ನೇ ಹುಟ್ಟುಹಬ್ಬದ ಸಂಭ್ರಮ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳು ದಿಗ್ಗಜ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ಅನಂತ ಧನ್ಯವಾದಗಳು. ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ಅಭಿಮಾನಿಗಳಿಗಾಗಿ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ ಎಂದು ಎಂದು ಬಿಗ್ ಬಿ ಹೇಳಿದ್ದಾರೆ.

ಇದೇ ವೇಳೆ ಉರಿ ಸೆಕ್ಟರ್ ಮೇಲೆ ಪಾಕ್ ಉಗ್ರರ ದಾಳಿ ಕುರಿತಂತೆ ಮಾತನಾಡಿದ ಬಚ್ಚನ್, 'ನಾವು ಯಾವಾಗಲೂ ಸೈನಿಕರ ಬೆಂಬಲಕ್ಕೆ ನಿಲ್ಲಬೇಕು. ಸೈನಿಕರ ಜೊತೆ ಸೇರಿ ನಾವು ಕೂಡ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು' ಎಂದು ಹೇಳಿದ್ದಾರೆ.

70 ರ ದಶಕದಿಂದ ಬಾಲಿವುಡ್'ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಿಗ್ ಬಿ, ದೀವಾರ್, ಡಾನ್, ಶೋಲೆ, ಕುರ್ಬಾನಿ, ಪಾ, ಪೀಕೂ ಸೇರಿದಂತೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಇದಷ್ಟೆ ಅಲ್ಲದೆ ಕೌನ್ ಬನೇಗಾ ಕರೋಡ್'ಪತಿ ಎಂಬ ಟಿ.ವಿ ಷೋನಲ್ಲೂ ಸೈ ಎನಿಸಿಕೊಂಡಿದ್ದಾರೆ.

ಈಗಲೂ ಸಾಮಾಜಿಕ ಕಾರ್ಯಾಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಮಿತಾಬ್ ಬಚ್ಚನ್ ಸಕ್ರಿಯರಾಗಿದ್ದಾರೆ.

ದಿಗ್ಗಜ ನಟನಿಗೆ 1984ರಲ್ಲಿ ಪದ್ಮ ಶ್ರೀ, 2001ರಲ್ಲಿ ಪದ್ಮ ಭೂಷಣ, ಹಾಗೂ 2015ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.