ಜಯಾ ಗೆ ಬಿಗ್ ಬಿ ಮಿಡ್ ನೈಟ್ ಕಾಲ್ ಮಾಡಿದ್ದೇಕೆ?

Amitabh Bachchan's Midnight Call To Jaya Bachchan On Their 45th Anniversary
Highlights

ಇಂದು ಬಾಲಿವುಡ್‌ನ ಅತ್ಯಂತ ಪ್ರತಿಷ್ಠಿತ ಜೋಡಿ ಅಮಿತಾಬ್-ಜಯಾ ಬಚ್ಚನ್ ಅವರ 45 ನೇ ವಿವಾಹ ವಾಷಿರ್ಷಿಕೋತ್ಸವ. ಈ ಕುರಿತು ಟ್ವಿಟ್ ಮಾಡಿರುವ ಬಿಗ್ ಬಿ, ಪ್ರೀತಿಯ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.

ಮುಂಬೆ(ಜೂ.3): ಇಂದು ಬಾಲಿವುಡ್ ನ ಅತ್ಯಂತ ಪ್ರತಿಷ್ಠಿತ ಜೋಡಿ ಅಮಿತಾಬ್-ಜಯಾ ಬಚ್ಚನ್ ಅವರ 45 ನೇ ವಿವಾಹ ವಾಷಿರ್ಷಿಕೋತ್ಸವ. ಈ ಕುರಿತು ಟ್ವಿಟ್ ಮಾಡಿರುವ ಬಿಗ್ ಬಿ, ಪ್ರೀತಿಯ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ತಮ್ಮ ಮತ್ತು ಜಯಾ ಬಚ್ಚನ್ ಅವರ ಹಳೆಯ ಫೋಟೋವೊಂದನ್ನು ಶೇರ್ ಮಾಡಿರುವ ಅಮಿತಾಬ್, ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಷಯ ತಿಳಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಜಯಾ ವಿದೇಶದಲ್ಲಿದ್ದು, ಈ ಸಂದರ್ಭದಲ್ಲಿ ನಾನು ಅವರಿಗೆ ಮಧ್ಯರಾತ್ರಿ ಕರೆ ಮಾಡಿ ವಿಷ್ ಮಾಡಲಿದ್ದೇನೆ ಎಂದೂ ಅಮಿತಾಬ್ ನಗೆ ಬೀರಿದ್ದಾರೆ.

1973ರ ಜೂನ್ 3 ರಂದು ಅಮಿತಾಬ್ ಮತ್ತು ಜಯಾ ಅವರ ವಿವಾಹ ಕೋಲ್ಕತ್ತಾದಲ್ಲಿ ನೆರವೇರಿತ್ತು. ಇವರ ವಿವಾಹಕ್ಕೂ ಕೇವಲ 1 ತಿಂಗಳ ಮುಂಚೆ ಅಮಿತಾಬ್ ಅವರ ಅತ್ಯಂತ ಜನಪ್ರೀಯ ಚಿತ್ರ ‘ಝಂಜೀರ್ ’ ರಿಲೀಸ್ ಆಗಿದ್ದು ವಿಶೇಷ.

ಇನ್ನು ತಂದೆ ತಾಯಿಗೆ ವಿವಾಹ ವಾಷಿರ್ಷಿಕೋತ್ಸವದ ವಿಶ್ ತಿಳಿಸಿರುವ ಪುತ್ರ ಅಭಿಷೇಕ್ ಬಚ್ಚನ್, ಇವರಿಬ್ಬರೂ ನಟಿಸಿರುವ ಅಭಿಮಾನ್ ಚಿತ್ರದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ನಿಮ್ಮಿಬ್ಬರ ಈ ಮಧುರ ಬಂಧ ಹೀಗೆಯೇ ಮುಂದುವರೆಯಲಿ ಎಂದು ಅಭಿಷೇಕ್ ಹಾರೈಸಿದ್ದಾರೆ. ಇದೇ ವೇಳೆ ಬಾಲಿವುಡ್ ನ ಹಲವು ನಟ ನಟಿಯರು ಅಮಿತಾಬ್ ಮತ್ತು ಜಯಾ ಬಚ್ಚನ್ ಅವರಿಗೆ ಶುಭಾಷಯ ತಿಳಿಸಿದ್ದಾರೆ. 

loader