ಬೆಂಗಳೂರು (ಜು. 18): ಬಿಗ್ ಬಿ ಅಮಿತಾಬಚ್ಚನ್ ಹೋದಲ್ಲಿ ಬಂದಲ್ಲಿ ಮಗಳ ಬಗ್ಗೆ ಹೇಳುತ್ತಾರೆ ಇರುತ್ತಾರೆ. ಇದೀಗ ಮಗಳ ವಿಚಾರಕ್ಕೆ ಭಾವುಕರಾಗಿದ್ದಾರೆ. 

ಬಿಗ್ ಬಿ ಮಗಳು ಶ್ವೇತಾ ನಂದ ತೆರೆ ಮೇಲೆ ಬರುತ್ತಿದ್ದಾರೆ. ಅಪ್ಪ-ಮಗಳಿಬ್ಬರು ಜ್ಯುವೆಲ್ಲರಿ ಜಾಹಿರಾತೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಮಿತಾಬ್ ಈ ಹಿಂದೆಯೇ ಹೇಳಿಕೊಂಡಿದ್ದರು. ಈಗ ಟ್ವಿಟರ್’ನಲ್ಲಿ ಅಧಿಕೃತಗೊಳಿಸಿದ್ದಾರೆ.

 

ಅಪ್ಪಾ, ನೀನು ನನ್ನ ಜೀವನದಲ್ಲಿ ಭದ್ರತಾ ಗೋಡೆಯಿದ್ದಂತೆ. ನಿನ್ನ ಜೊತೆ ಕೆಲಸ ಮಾಡಲು ಹೆಮ್ಮೆಯೆನಿಸುತ್ತದೆ. ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ.

ಮಗಳ ಟ್ವೀಟ್ ನೋಡಿ ಅಮಿತಾಬ್ ಬಾವುಕರಾಗಿದ್ದಾರೆ. 

ಇದೊಂದು ಎಮೋಶನಲ್ ಮೂಮೆಂಟ್. ಇದನ್ನು ನೋಡಿದಾಗಲೆಲ್ಲಾ ಗೊತ್ತಿಲ್ಲದೇ ಕಣ್ಣಂಚು ಒದ್ದೆಯಾಗುತ್ತದೆ. ಮಗಳು ಯಾವತ್ತಿದ್ದರೂ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. 

ಒಟ್ಟಿನಲ್ಲಿ ಅಪ್ಪ-ಮಗಳ ಭಾವುಕತೆಗೆ ಸಾಕ್ಷಿಯಾಗಿದೆ ಜ್ಯುವೆಲ್ಲರಿ ಜಾಹಿರಾತು.