ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಮದುವೆ 2018ರ ಅದ್ಧೂರಿ ಮದುವೆ ಎನ್ನಲಾಗುತ್ತಿದೆ. ಮದುವೆ ಸಂಭ್ರಮದಲ್ಲಿ ದಿಗ್ಗಜರೆಲ್ಲಾ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದಾರೆ. ಮದುವೆಯ ಹಲವಾರು ವಿಡಿಯೋಗಳೂ ವೈರಲ್ ಆಗಿವೆ. ಆದರೀಗ ಬಾಲಿವುಡ್ ದಿಗ್ಗಜ ನಟರಾದ ಅಮಿತಾಬ್, ಅಮೀರ್ ಖಾನ್ ಹಾಗೂ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಅತಿಥಿ ಸತ್ಕಾರದಲ್ಲಿ ತೊಡಗಿಸಿಕೊಂಡ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಮುದ್ದಿನ ಮಗಳು ಇಶಾ ಅಂಬಾನಿಯ ಮದುವೆ ಕಾರ್ಯಕ್ರಮವ ಪ್ರಸಕ್ತ ವರ್ಷದ ಬಹುದೊಡ್ಡ ವಿವಾಹ ಕಾರ್ಯಕ್ರಮ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅಮೀರ್ ಖಾನ್ ಹಾಗೂ ಐಶ್ವರ್ಯಾ ರೈ ಖುದ್ದು ಅತಿಥಿ ಸತ್ಕಾರದಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳು ಕಂಡು ಬಂದಿವೆ. ಇಶಾ ಅಂಬಾನಿ ಪೀರಾಮಲ್ ಗ್ರೂಪ್‌ನ ಚೇರ್ಮನ್ ಅಜಯ್ ಪೀರಾಮಲ್ ಮಗ ಆನಂದ್ ಪೀರಾಮಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಋಎ. ಈ ಮದುವೆಯ ಸಂಗೀತ ಕಾರ್ಯಕ್ರಮದಿಂದ ಆರತಕ್ಷತೆ ಕಾರ್ಯಕ್ರಮದವರೆಗಿನ ಎಲ್ಲಾ ಸಂಭ್ರಮಗಳಲ್ಲೂ ಬಾಲಿವುಡ್ ಗಣ್ಯರು ಭಾಗವಹಿಸಿದ್ದರು. ಉದಯ್‌ಪುರ್ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್ ಗಣ್ಯರಷ್ಟೇ ಅಲ್ಲದೇ, ಖುದ್ದು ಅಂಬಾನಿ ಕುಟುಂಬವೇ ಮನೋರಂಜನೆ ಕಾರ್ಯಕ್ರಮ ನೀಡಿತ್ತು. ಇಲ್ಲಿ ಐಶ್ವರ್ಯಾ ರೈ ಹಾಗೂ ದೀಪಿಕಾ ಪಡುಕೋಣೆ ಒಟ್ಟಾಗಿ ಡಾನ್ಸ್ ಮಾಡಿದ್ದರು. ಇಶಾ ಅಂಬಾನಿ ಕೂಡಾ ತನ್ನ ಗಂಡನಿಗೆ ಸಿನಿಮೀಯ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡಿದ್ದರು. ಈ ಅದ್ಧೂರಿ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

View post on Instagram

ಆದರೀಗ ಇಂಟರ್ನೆಟ್‌ನಲ್ಲಿ ಮತ್ತೆ ಕೆಲವು ವಿಡಿಯೋಗಳು ಹಾಗೂ ಫೋಟೋ ವೈರಲ್ ಆಗುತ್ತಿದೆ. ಇದರಲ್ಲಿ ಬಾಲಿವುಡ್‌ನ ಸ್ಟಾರ್ಸ್ ಅಮಿತಾಬ್ ಬಚ್ಚನ್, ಅಮೀರ್ ಖಾನ್ ಮದುವೆಗೆ ಆಗಮಿಸಿರುವ ಅತಿಥಿಗಳಿಗೆ ಖುದ್ದು ತಾವಾಗೇ ಊಟ ಬಡಿಸಿದ್ದಲ್ಲದೇ, ಸತ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಅತ್ತ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಡಿದ್ದ ಬಾಲಿವುಡ್‌ ನಟಿ ಐಶ್ವರ್ಯಾ ರೈ ಕೂಡಾ ಆಕಾಶ್ ಅಂಬಾನಿ ಮದುವೆಯಾಗಲಿರುವ ಶ್ಲೋಕಾ ಮೆಹ್ತಾ ಹಾಗೂ ಮಗಳು ಆರಾಧ್ಯ ಜೊತೆಗೂಡಿ ಅತಿಥಿಗಳಿಗೆ ತಿಂಡಿ ಕಳುಹಿಸಿಕೊಡುವಲ್ಲಿ ತಲ್ಲೀನರಾಗಿರುವುದೂ ಕಂಡು ಬಂದಿದೆ.

View post on Instagram

ಬೆಳ್ಳಿಯ ಪಾತ್ರೆ ಹಿಡಿದಿರುವ ಅಮಿತಾನ್ ಬಚ್ಚನ್ ಒಂದೆಡೆ ಅತಿಥಿಗಳಿಗೆ ಡೋಕ್ಲಾ ಬಡಿಸುತ್ತಿದ್ದರೆ, ಮತ್ತೊಂದೆಡೆ ಅಮೀರ್ ಖಾನ್ ರಾಯ್ತಾ ಸರ್ವ್‌ ಮಾಡುತ್ತಿದ್ದಾರೆ.

View post on Instagram

ಐಶ್ವರ್ಯಾ ರೈ ಶ್ಲೋಕಾ ಮೆಹ್ತಾ ಜೊತೆಗೂಡಿ ಅತಿಥಿಗಳಿಗೆ ಸಿಹಿ ತಿಂಡಿ ಹಂಚುವ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.