ನೂರಾರು ಜನ ಸೇರಿದ್ದ ಸಭೆಯಲ್ಲಿ ಯಾರಾದರೂ ದರ್ಶನ್ ಅವರನ್ನು ಏಕವಚನದಲ್ಲಿ ಗದರಿಕೊಳ್ಳುವುದಕ್ಕೆ ಸಾಧ್ಯವೇ? ಅದೇ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನೇ ‘ಅಯ್ಯೋ ನಿಮ್ಗೆ ಗೊತ್ತಿಲ್ಲ ಸುಮ್ನಿರಿ’ ಎನ್ನುವುದಕ್ಕೆ ಆಗುತ್ತಾ?
ನೂರಾರು ಜನ ಸೇರಿದ್ದ ಸಭೆಯಲ್ಲಿ ಯಾರಾದರೂ ದರ್ಶನ್ ಅವರನ್ನು ಏಕವಚನದಲ್ಲಿ ಗದರಿಕೊಳ್ಳುವುದಕ್ಕೆ ಸಾಧ್ಯವೇ? ಅದೇ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನೇ ‘ಅಯ್ಯೋ ನಿಮ್ಗೆ ಗೊತ್ತಿಲ್ಲ ಸುಮ್ನಿರಿ’ ಎನ್ನುವುದಕ್ಕೆ ಆಗುತ್ತಾ? ಇಬ್ಬರು ಹಿರಿಯ ನಟಿಯರ ಹೆಗಲ ಮೇಲೆ ಕೈ ಹಾಕಿಕೊಂಡು ‘ಸ್ಮೈಲ್ ಪ್ಲೀಸ್... ಈಗ ಎಲ್ರೂ ಫೋಟೋ ತಗೊಳ್ಳಿ’ ಎಂದು ದಬಾಯಿಸಬಹುದೇ?
- ಖಂಡಿತ ಇದ್ಯಾವುದೂ ಸಾಧ್ಯವಿಲ್ಲ ಎಂದೇ ಬಹುತೇಕರ ಮಾತು. ಆದರೆ, ಅದೆಲ್ಲವೂ ಸಾಧ್ಯ ಎಂದು ತೋರಿಸಿದ್ದು ಅಂಬರೀಶ್. ಅದಕ್ಕೆ ಅವರು ರೆಬೆಲ್ ಸ್ಟಾರ್ ಅಂಬರೀಶ್ ಆಗಿದ್ದು. ಅಂದಹಾಗೆ ಇದು ನಡೆದಿದ್ದು ಇಡೀ ಚಿತ್ರೋದ್ಯಮ ಸೇರಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮದ ವೇದಿಕೆ ಮೇಲೆ.
‘ಏಯ್ ಸುಮ್ನೆ ಕುತ್ಕೊಳ್ರೋ’, ‘ಹೋಗ್ರೋ ಆಚೆ’, ‘ಏಯ್ ಚಿನ್ನೇಗೌಡ ನಿನ್ಗೆ ಓಟ್ ಬೇಕು ಅಂದ್ರೆ ವೇದಿಕೆಯಿಂದ ಇಳಿ ಬೇಗ’, ‘ಅಯ್ಯೋ ಬಾರಮ್ಮ, ಆ ಮೇಲೆ ಹೂವಿನ ಹಾರ ಹಾಕುವಂತೆ’ ಹೀಗೆ ಇಡೀ ಕಾರ್ಯಕ್ರಮದಲ್ಲಿ ಅಂಬರೀಶ್ ಹಂಗಾಮ ನೋಡಿ ಎಲ್ಲರ ಮುಖದಲ್ಲೂ ನಗು.
