ಹೊಸ ಲುಕ್‌ನಲ್ಲಿ ಹೆಬ್ಬುಲಿ ನಟಿ | ಕೈ, ಮುಖದ ಮೇಲೆ ರಕ್ತದ ಕಲೆ | ಟಾಯ್ಲೆಟ್ ಪೇಪರನ್ನೇ ಮೈಗೆ ಸುತ್ತಿಕೊಂಡ ನಟಿ | ಅಷ್ಟಕ್ಕೂ ಏನಾಯ್ತು ಈ ನಟಿಗೆ? ಯಾಕೆ ಈ ಅವತಾರ?
ಬೆಂಗಳೂರು (ಸೆ. 05): ನಟಿ ಅಮಲಾ ಪೌಲ್ ’ಅದಾಯಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ನಿರ್ದೇಶಕ ವೆಂಕಟ ಪ್ರಭು ತಮ್ಮ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ.
ಈ ಫೋಟೋ ಭಾರೀ ವೈರಲ್ ಆಗಿದೆ. ಅಮಲಾ ಪೌಲ್ ಮುಖ ಹಾಗೂ ಕೈಗಳ ಮೇಲೆ ರಕ್ತದ ಕಲೆಗಳಾಗಿದ್ದು ಟಾಯ್ಲೆಟ್ ಪೇಪರ್ ಗಳನ್ನು ಸುತ್ತಲಾಗಿದೆ. ತುಕ್ಕು ಹಿಡಿದ ಕಂಬವನ್ನು ಹಿಡಿದು ಸಹಾಯಕ್ಕಾಗಿ ಅಳುತ್ತಿದ್ದಾರೆ.
ಅದಾಯಿ ಚಿತ್ರವನ್ನು ರತ್ನ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರವಿನ್ನು ಪ್ರೊಡಕ್ಷನ್ ಹಂತದಲ್ಲಿದೆ.
ನಿರ್ದೇಶಕ ರತ್ನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಅದಾಯಿ ಒಂದು ಕಾಮಿಡಿ ಚಿತ್ರ. ಅಮಲಾ ಇದುವರೆಗೂ ಇಂತಹ ಪಾತ್ರ ಮಾಡಿಲ್ಲ. ಇದರಲ್ಲಿ ಮನರಂಜನಾ ಅಂಶವಿದೆ. ಪ್ರಬುದ್ಧ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ನಿರ್ಮಿಸಿದ್ದೇವೆ ಎಂದಿದ್ದಾರೆ.
