ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್'ಗೆ ತನ್ನ ಕುಟುಂಬದ ಮೇಲೆ ಬಹಳ ಪ್ರೀತಿ ಇದೆ. ಹಲವಾರು ಬಾರಿ ಅವರು ತನ್ನ ತಂದೆ- ತಾಯಿ, ಸಹೋದರ- ಸಹೋದರಿಯರೊಂದಿಗೆ ಸಮಯ ಕಳೆಯುತ್ತಾರೆ. ಅಲ್ಲದೇ ತಾನು ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕುಟುಂಬದ ಸದಸ್ಯರ ಕುರಿತಾಗಿ ಮಾತನಾಡುವುದೂ ಇದೆ. ಈ ವೇಳೆ ಅವರಿಗೆ ತನ್ನವರ ಮೇಲೆ ಅದೆಷ್ಟು ಪ್ರೀತಿ ಇದೆ ಎಂಬುವುದು ತಿಳಿದು ಬರುತ್ತದೆ. ಸದ್ಯ ಅವರು 'ಐಷಾರಾಮಿ ಬಂಗಲೆಗಾಗಿ ನಾನು ನನ್ನ ತಂದೆ, ತಾಯಿಯನ್ನು ಬಿಡಲು ನಾನು ತಯಾರಿಲ್ಲ' ಎಂದಿದ್ದಾರೆ.
ಮುಂಬೈ(ಜೂ.05): ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್'ಗೆ ತನ್ನ ಕುಟುಂಬದ ಮೇಲೆ ಬಹಳ ಪ್ರೀತಿ ಇದೆ. ಹಲವಾರು ಬಾರಿ ಅವರು ತನ್ನ ತಂದೆ- ತಾಯಿ, ಸಹೋದರ- ಸಹೋದರಿಯರೊಂದಿಗೆ ಸಮಯ ಕಳೆಯುತ್ತಾರೆ. ಅಲ್ಲದೇ ತಾನು ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕುಟುಂಬದ ಸದಸ್ಯರ ಕುರಿತಾಗಿ ಮಾತನಾಡುವುದೂ ಇದೆ. ಈ ವೇಳೆ ಅವರಿಗೆ ತನ್ನವರ ಮೇಲೆ ಅದೆಷ್ಟು ಪ್ರೀತಿ ಇದೆ ಎಂಬುವುದು ತಿಳಿದು ಬರುತ್ತದೆ. ಸದ್ಯ ಅವರು 'ಐಷಾರಾಮಿ ಬಂಗಲೆಗಾಗಿ ನಾನು ನನ್ನ ತಂದೆ, ತಾಯಿಯನ್ನು ಬಿಡಲು ನಾನು ತಯಾರಿಲ್ಲ' ಎಂದಿದ್ದಾರೆ.
ಮಕ್ಕಳ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ 'ಸ ರಿ ಗ ಮ ಪ ಲಿಟ್ಲ್ ಛಾಂಪ್ಸ್' ಸೀಜನ್ 6ರಲ್ಲಿ ತನ್ನ ತಮ್ಮ ಹಾಗೂ ನಟ, ನಿರ್ಮಾಪಕ ಸೋಹೆಲ್ ಖಾನ್'ರೊಂದಿಗೆ ತನ್ನ ಸಿನಿಮಾ 'ಟ್ಯೂಬ್ ಲೈಟ್' ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ಆಗಮಿಸಿದ್ದರು. ಈ ವೇಳೆ ಧಿರೂನ್ ಟಿಕೂ ಎಂಬ ಸ್ಪರ್ಧಿ 'ನೀವು ಐಷಾರಾಮಿ ಬಂಗಲೆಯನ್ನೇ ಖರೀದಿಸಬಹುದು, ಹೀಗಿದ್ದರೂ ಇನ್ನೂ ಯಾಕೆ ಫ್ಲ್ಯಾಟ್'ನಲ್ಲಿದ್ದೇರಿ?' ಎಂದು ಕೇಳುದ್ದಾನೆ. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್ 'ನನಗೆ ಐಷಾರಾಮಿ ಬಂಗಲೆಗಿಂತ ಬಾಂದ್ರಾದ ಫ್ಲ್ಯಾಟ್'ನಲ್ಲಿ ಸಮಯ ಕಳೆಯಲು ಇಷ್ಟವಾಗುತ್ತದೆ. ಯಾಕೆಂದರೆ ಆ ಫ್ಲ್ಯಾಟ್'ನ ಮೇಲಿನ ಮಹಡಿಯಲ್ಲಿ ನನ್ನ ತಂದೆ, ತಾಯಿ ವಾಸವಿದ್ದಾರೆ' ಎಂದಿದ್ದಾರೆ.
ಇದೇ ವಿಚಾರವಾಗಿ ಮುಂದೆ ಮಾತನಾಡಿದ ಸಲ್ಮಾನ್ ಖಾನ್ 'ಈ ಕಟ್ಟಡದಲ್ಲಿ ವಾಸವಿರುವ ಪ್ರತಿಯೊಬ್ಬರೂ ಒಂದು ಕುಟುಂಬದಂತಿದ್ದಾರೆ. ನಾವು ಚಿಕ್ಕವರಿದ್ದಾಗ ಈ ಕಟ್ಟಡದಲ್ಲಿರುವ ಪ್ರಿತಿಯೊಬ್ಬಮಗು ಕೂಡಾ ಒಟ್ಟಾಗಿ ಹೂದೋಟದಲ್ಲಿ ಆಡುತ್ತಿದ್ದೆವು. ಕೆಲವೊಂದು ಬಾರಿ ಅಲ್ಲೇ ಮಲಗಿದ್ದೂ ಇದೆ. ಆ ಫ್ಲ್ಯಾಟ್'ನೊಂದಿಗೆ ನನ್ನ ಬಾಲ್ಯದ ಹಲವಾರು ನೆನಪುಗಳು ಬೆಸೆದುಕೊಂಡಿವೆ. ಹೀಗಾಗಿಯೇ ಆ ಫ್ಲ್ಯಾಟ್'ನೊಂದಿಗೆ ನನ್ನ ಭಾವನಾತ್ಮಕ ಸಂಬಂಧವಿದೆ' ಎಂದಿದ್ದಾರೆ.
ಈ ಮಾತು ಕೇಳಿದ ಬಳಿಕ ಸಲ್ಮಾನ್ ತನ್ನವರ ಮೇಲೆ ಅದೆಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುವುದು ತಿಳಿದು ಬರುತ್ತದೆ.
