ಆಪ್ತ ಸಿಬ್ಬಂದಿಗೆ ಮನೆ ಖರೀದಿಸಲು 50 ಲಕ್ಷ ಕೊಟ್ಟ ಅಲಿಯಾ!
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆ ಹೊಂದಿದ್ದ ಕಾರು ಚಾಲಕ ಹಾಗೂ ಸಿಬ್ಬಂದಿ| ಆಸೆ ಪೂರೈಸಲು ತಲಾ 25 ಲಕ್ಷ ನೀಡಿದ ಅಲಿಯಾ ಭಟ್
ನವದೆಹಲಿ[ಮಾ.20]: ಇತ್ತೀಚೆಗಷ್ಟೇ ತಮ್ಮ 26ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ತಾರೆ ಅಲಿಯಾ ಭಟ್ ವಿಶೇಷ ಕಾರಣಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.
ಅದೇನು ಅಂದರೆ, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆಯನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಕಾರು ಚಾಲಕ ಹಾಗೂ ಇನ್ನೊಬ್ಬ ಸಿಬ್ಬಂದಿಗೆ ಅಲಿಯಾ ಅವರು ತಲಾ 25 ಲಕ್ಷ ರು. ನೀಡಿದ್ದಾರೆ.
ಸಿನಿಮಾ ರಂಗ ಪ್ರವೇಶಿಸಿದ 2012ರಿಂದಲೂ ಕಾರು ಚಾಲಕ ಸುನಿಲ್ ಹಾಗೂ ಸಹಾಯಕ ಅನ್ಮೋಲ್ ತಮ್ಮ ಜೊತೆಗೆ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ತಮ್ಮ ಪ್ರೀತಿ ಮತ್ತು ಅಕ್ಕರೆಯನ್ನು ತೋರಿಸಲು ಅಲಿಯಾ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಕೆಲ ದಿನಗಳ ಮುನ್ನ ಈ ನೆರವು ನೀಡಿದ್ದರು. ಮಾ.15ರಂದು ಅಲಿಯಾ ಅವರು 26ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.