ಬಾಲಿವುಡ್ ನ ಆಕ್ಷನ್ ಕಿಂಗ್ ಆಕ್ಷಯ್ ಕುಮಾರ್ ಸದ್ಯ ತೆರೆಮೇಲೆ ಅಷ್ಟೆ ಅಲ್ಲ ರಿಯಲ್ ಲೈಫ್ ನಲ್ಲೂ ಹೀರೋನೇ. ಯಾಕಂದ್ರೆ ದೀಪಾವಳಿ ಹಬ್ಬವನ್ನ ಎಲ್ಲರು ಅವರವರ ಮನೆಯಲ್ಲಿ ಹೊಸ ಬಟ್ಟೆ ಹೊಸ ವಸ್ತು ಖರೀದಿಸಿ, ಪಟಾಕಿ ಹೊಡೆದು ಸಂಭ್ರಮಿಸಿದರೆ ಅಕ್ಷಯ್ ಮಾಡಿದ್ದೇ ಬೇರೆ.
ಮುಂಬೈ (ಅ.23): ಬಾಲಿವುಡ್ ನ ಆಕ್ಷನ್ ಕಿಂಗ್ ಆಕ್ಷಯ್ ಕುಮಾರ್ ಸದ್ಯ ತೆರೆಮೇಲೆ ಅಷ್ಟೆ ಅಲ್ಲ ರಿಯಲ್ ಲೈಫ್ ನಲ್ಲೂ ಹೀರೋನೇ. ಯಾಕಂದ್ರೆ ದೀಪಾವಳಿ ಹಬ್ಬವನ್ನ ಎಲ್ಲರು ಅವರವರ ಮನೆಯಲ್ಲಿ ಹೊಸ ಬಟ್ಟೆ ಹೊಸ ವಸ್ತು ಖರೀದಿಸಿ, ಪಟಾಕಿ ಹೊಡೆದು ಸಂಭ್ರಮಿಸಿದರೆ ಅಕ್ಷಯ್ ಮಾಡಿದ್ದೇ ಬೇರೆ.
ಮಹಾರಾಷ್ಟ್ರದ ಕೊಲ್ಹಾಪುರದ 103 ಹುತಾತ್ಮ ಯೋಧರ ಕುಟುಂಬಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿಹಿ ತಿಂಡಿ ಜೊತೆಗೆ ತಲಾ 25 ಸಾವಿರ ರುಪಾಯಿ ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರೆ. ಸದಾ ಒಂದಿಲ್ಲೊಂದು ರೀತಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅಕ್ಷಯ್ ಕುಮಾರ್ ಯುದ್ಧದಲ್ಲಿ ಹೋರಾಡಿ ದೇಶಕ್ಕಾಗಿ ಮಡಿದ ಯೋಧರ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ. 26 ಲಕ್ಷ ಹಣವನ್ನ 103 ಸೇನಾ ಕುಟುಂಬಕ್ಕೆ ನೀಡಿ ನಿಜವಾದ ನಾಯಕ ಅನ್ನಿಸಿಕೊಂಡಿದ್ದಾರೆ.
