ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ 50 ವರ್ಷ ಪ್ರಾಯದ ಅಕ್ಷಯ್ ಕುಮಾರ್ ಸಿನೆಮಾ ಕ್ಯಾರಿಯರ್’ನ ಆರಂಭದ ದಿನಗಳಲ್ಲಿ ಸಹಿಸಿಕೊಂಡ ಕಷ್ಟಗಳ ಬಗ್ಗೆ ಮಾತು
ಮುಂಬೈ: ಬಾಲಿವುಡ್’ನಲ್ಲಿ ಒಂದು ಮಟ್ಟಕ್ಕೆ ಬೆಳೆಯಬೇಕಾದರೆ ಯಾವ್ಯಾವ ರಿತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂಬುವುದರ ಬಗ್ಗೆ ಖ್ಯಾತ ನಟ ಅಕ್ಷಯ್ ಕುಮಾರ್ ಬಹಿರಂಗಪಡಿಸಿದ್ದಾರೆ.
ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ 50 ವರ್ಷ ಪ್ರಾಯದ ಅಕ್ಷಯ್ ಕುಮಾರ್ ತಾನು ಅನುಭವಿಸಿದ ವೇದನೆಗಳನ್ನು ಬಿಚ್ಚಿಟ್ಟಿದ್ದಾರೆ.
ಸ್ಪೆಷಲ್ 26, ಬೇಬಿ, ಏರ್ ಲಿಫ್ಟ್, ರುಸ್ತಮ್’ನಂತಹ ಬ್ಲಾಕ್’ಬಸ್ಟರ್ ಸಿನೆಮಾಗಳಲ್ಲಿ ಅಭಿನಯಿಸಿರುವ ಅಕ್ಷಯ್ ಕುಮಾರ್, ತನ್ನ ಸಿನೆಮಾ ಕ್ಯಾರಿಯರ್’ನ ಆರಂಭದ ದಿನಗಳಲ್ಲಿ ಸಹಿಸಿಕೊಂಡ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
ಒಬ್ಬ ನಟನಿಗೆ ಸಿಗುವ ಸೌಲಭ್ಯಗಳು ಆತನ ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದಿರುವ ಅಕ್ಷಯ್, ಆರಂಭದ ದಿನಗಳಲ್ಲಿ ತಾನು ಪರಕೀಯನಂತೆ ಭಾಸವಾಗುವ ರೀತಿಯಲ್ಲಿ ನಡೆಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ಇಬ್ಬರು ನಾಯಕರು ನಟಿಸುತ್ತಿರುವ ಸಿನಿಮಾದಲ್ಲಿ ನಾನು ನಟಿಸಿದ್ದ ಸಂದರ್ಭದಲ್ಲಿ, ನಮ್ಮಿಬ್ಬರಿಗೆ ಸಮಾನ ಪಾತ್ರ ಇದ್ದಾಗ್ಯೂ, ಇನ್ನೋರ್ವ ನಟನಿಗೆ ತಂಗಲು ಐಶಾರಾಮಿ ಕೊಠಡಿ ಕೊಡುತ್ತಿದ್ದರು, ನನಗೆ ಸಿಂಗಲ್ ರೂಂ ನೀಡಲಾಗಿತ್ತು. ಆತನಿಗೆ ಐಶಾರಾಮಿ ಕಾರು ನೀಡಲಾಗಿತ್ತು, ಆದರೆ ನನಗೆ ಬಸ್ಸಿನಲ್ಲಿ ಬರಲು ಹೇಳಲಾಗಿತ್ತು, ಎಂದು ಅಕ್ಷಯ್ ಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
