ಕರಣ್‌ ಜೋಹರ್‌ ನಡೆಸಿಕೊಡೋ ಕಾಫೀ ವಿಥ್‌ ಕರಣ್‌' ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್‌ ಆ್ಯಕ್ಷನ್‌ ಸ್ಟಾರ್‌ ಅಕ್ಷಯ್ ಕುಮಾರ್, ಬಾಲಿವುಡ್'ನ ಮೂರು ಜನ ಖಾನ್‌ಗಳ  ಕಾಲೆಳೆದಿದ್ದಾರೆ. 

ಮುಂಬೈ(ನ.16): ಬಾಲಿವುಡ್‌ನಲ್ಲಿ ಸ್ಟಾರ್‌‌‌ ಡಮ್‌ ಬಗ್ಗೆ ಆಗಾಗ ಚರ್ಚೆಯಾಗ್ತಾನೆ ಇರುತ್ತೆ. ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್‌ ಜೋಹರ್‌ ನಡೆಸಿಕೊಡೋ ಕಾಫೀ ವಿಥ್‌ ಕರಣ್‌' ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್‌ ಆ್ಯಕ್ಷನ್‌ ಸ್ಟಾರ್‌ ಅಕ್ಷಯ್ ಕುಮಾರ್, ಬಾಲಿವುಡ್'ನ ಮೂರು ಜನ ಖಾನ್‌ಗಳ ಕಾಲೆಳೆದಿದ್ದಾರೆ. 

ಸ್ಟಾರ್‌‌ ಡಮ್‌ ಎಂಬ ರೇಸ್‌ನಲ್ಲಿ ಯಾರು ಹೆಚ್ಚು ಕಾಲ ಬದುಕುತ್ತಾರೆ ಎಂದು ಕರಣ್‌ ಅಕ್ಷಯ್‌ಗೆ ಪ್ರಶ್ನೆಯೊಂದನ್ನ ಕೇಳಿದರು. ಈ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದ ಅಕ್ಕಿ, ಒಂದು ವೇಳೆ ಸಲ್ಮಾನ್‌, ಶಾರೂಖ್‌ ಮತ್ತು ಅಮೀರ್‌ ಖಾನ್‌ ಸಿಗರೇಟ್‌ ಸೇದುವುದನ್ನು ತ್ಯಜಿಸಿದರೆ ಅವರೇ ಹೆಚ್ಚು ಕಾಲ ಉಳಿಯುತ್ತಾರೆ. ಇಲ್ಲವಾದರೆ ನಾನೇ ಹೆಚ್ಚು ಕಾಲ ಬದುಕುತ್ತೇನೆ' ಎಂದು ಸ್ಟ್ರೈಟ್ ಆಗಿ ಉತ್ತರಿಸಿದರು.