ಕೇಸರಿ ಸಿನಿಮಾ ಸೆಟ್‌ನಲ್ಲಿ ಟಾಯ್ಲೆಟ್ ಇಲ್ಲದೇ ಅಕ್ಷಯ್ ಕುಮಾರ್ ಪೇಚಾಟ |  ದುಬಾರಿ ಸೆಟ್ ಆದ್ರೂ ಟಾಯ್ಲೆಟ್ ಮಾತ್ರ ಇರಲಿಲ್ಲ| 

ಮುಂಬೈ (ಡಿ. 15): ನಿಸರ್ಗದ ಕರೆಯನ್ನು ಬಹಳ ಹೊತ್ತು ಯಾರಿಗೂ ತಡೆದುಕೊಂಡಿ ಇರಲಾಗುವುದಿಲ್ಲ. ಬಹಳ ಹೊತ್ತು ತಡೆದುಕೊಂಡರೆ ಜೀವ ಹಿಂಡಿದಂತಾಗುತ್ತದೆ.ಇಂತದ್ದೆ ಒಂದು ಸನ್ನಿವೇಶವನ್ನು ನಟ ಅಕ್ಷಯ್ ಕುಮಾರ್ ಎದುರಿಸಿದರು. 

ಅಕ್ಷಯ್ ಕುಮಾರ್ ಆಗಲಿದ್ದಾರೆ ಪ್ರಧಾನಿ?

ನಟ ಅಕ್ಷಯ್ ಕುಮಾರ್ ಕೇಸರಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ವೇಳೆ ನಿಸರ್ಗದ ಕರೆ ಬಂದಿದ್ದು ಸರಿಯಾದ ಶೌಚಾಲಯವಿಲ್ಲದೇ ಬಹಳ ಹೊತ್ತು ತಡೆದುಕೊಂಡಿದ್ದರು. ನಂತರ ಅಲ್ಲಿಯೇ ಹತ್ತಿರದಲ್ಲಿ ಸ್ಟುಡಿಯೋಗೆ ಹೋಗಿ ನಿರಾಳವಾದರು. 

ಬಿಜೆಪಿ ಸೇರಿದ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌?

ಕರಣ್ ಜೋಹರ್ ರ ಧರ್ಮ ಪ್ರೊಡಕ್ಷನ್ ನಲ್ಲಿ ದುಬಾರಿ ವೆಚ್ಚದಲ್ಲಿ ಕೇಸರಿ ಸಿನಿಮಾ ರೆಡಿಯಾಗುತ್ತಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಜಾ ಎಂದರೆ ಈ ಚಿತ್ರದ ಮೇಕಪ್ ರೂಮ್ ಗಾಗಿ 2.50 ಲಕ್ಷ ಖರ್ಚು ಮಾಡಲಾಗಿದೆ. ಆದರೆ ಟಾಯ್ಲೆಟ್ ವ್ಯವಸ್ಥೆ ಮಾತ್ರ ಇಲ್ಲ. 

ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಸ್ವಚ್ಛ ಭಾರತ ಅಭಿಯಾನದ ಉದ್ದೇಶವನ್ನು ಇಟ್ಟುಕೊಂಡು ಅಕ್ಷಯ್ ಕುಮಾರ್ ‘ಟಾಯ್ಲೆಟ್- ಏಕ್ ಪ್ರೇಮ್ ಕಥಾ’ ಎನ್ನುವ ಸಿನಿಮಾ ಮಾಡಿದ್ದಾರೆ. ಇದರ ಟ್ರೈಲರ್’ನ್ನು ಪ್ರಧಾನಿ ಮೋದಿ ಕೂಡಾ ಮೆಚ್ಚಿದ್ದಾರೆ. ಈಗ ಸ್ವತಃ ಅಕ್ಷಯ್ ಗೆ ಟಾಯ್ಲೆಟ್ಟಿನ ಮಹತ್ವ ಅರ್ಥವಾಗಿದೆ.