ಅಗ್ರ ಸ್ಥಾನದಲ್ಲಿರುವ ಅಕ್ಷಯ್, ಸಲ್ಮಾನ್ ಪಡೆವ ಸಂಭಾವನೆ ಎಷ್ಟು..?

https://static.asianetnews.com/images/authors/b348a094-0bef-5801-a1f6-61e57071185f.jpg
First Published 18, Jul 2018, 10:36 AM IST
Akshay Kumar and Salman Khan among world's highest paid  Stars
Highlights

ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಸ್ಥಾನ ಪಡೆದುಕೊಂಡಿ ದ್ದಾರೆ. 

ನ್ಯೂಯಾರ್ಕ್: ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಸ್ಥಾನ ಪಡೆದುಕೊಂಡಿ ದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ಜಗತ್ತಿನ ಸೆಲೆಬ್ರಿಟಿಗಳ ಪಟ್ಟಿಯನ್ನು ಅಮೆರಿಕದ ಫೋರ್ಬ್ಸ್ ನಿಯತ ಕಾಲಿಕೆ ಪ್ರಕಟಿಸಿದೆ. 

265 ಕೋಟಿ ಸಂಭಾವನೆಯೊಂದಿಗೆ ಅಕ್ಷಯ್ ಕುಮಾರ್ 76 ನೇ ರ್ಯಾಂಕ್ ಪಡೆದಿದ್ದಾರೆ. ಇನ್ನು ಸಲ್ಮಾನ್ ಖಾನ್ 245  ಕೋಟಿ ಸಂಭಾವನೆ ಯೊಂದಿಗೆ 82 ನೇ ಸ್ಥಾನ ಪಡೆದಿದ್ದಾರೆ. 

ವಿಶ್ವದ ಅಗ್ರ ಐದು ಸೆಲೆಬ್ರಿಟಿಗಳು: ಫ್ಲಾಯ್ಡ್ ಮೇವೆದರ್ (ಅಥ್ಲೀಟ್) 1852 ಕೋಟಿ ರು., ಜಾರ್ಜ್ ಕ್ಲೂನಿ (ನಟ) 1553 ಕೋಟಿ ರು, ಕೈಲೀ ಜೆನ್ನರ್ (ರೂಪದರ್ಶಿ) 10.82 ಕೋಟಿ ರು., ಜುಡಿ ಶಿಂಡ್ಲಿನ್ (ವಕೀಲೆ) 955 ಕೋಟಿ ರು., ಡ್ವಾನೆ ಜಾನ್‌ಸನ್ (ನಟ) 806 ಕೋಟಿ ರು.

loader