ಅಜಯ್ ದೇವ್’ಗನ್ ಪ್ರಶ್ನೆಗೆ ಕಸಿವಿಸಿಗೊಂಡ ಇಲಿಯಾನಾ

Ajay Devgn asked Ileana DCruz  Are You Married
Highlights

ಇಲಿಯಾನ ಡಿಕ್ರೂಜ್ ಮತ್ತು ಅಜಯ್ ದೇವಗನ್ ಒಟ್ಟಿಗೆ ‘ರೈಡ್’ ಚಿತ್ರದ ಆಡಿಯೋ ಲಾಂಚ್‌ನಲ್ಲಿ ತೊಡಗಿದ್ದ ವೇಳೆ ಅಜಯ್ ದೇವಗನ್ ಕಡೆಯಿಂದ ಇಲಿಯಾನ ಕಡೆಗೆ ಒಂದು ಪ್ರಶ್ನೆ ಹಾರಿ ಬರುತ್ತದೆ ‘ನೀನು ಮದುವೆಯಾಗಿದ್ದೀಯಾ?’ ಎಂದು. ಇದನ್ನು ಕೇಳಿದ್ದೇ ಅಲ್ಲಿದ್ದವರೆಲ್ಲಾ ಒಂದು ಕ್ಷಣ ಅವಕ್ಕಾಗಿ ಅತ್ತಲೇ ನೋಡಿದರು. ಇದಕ್ಕೆ ಏನೂ ಪ್ರತಿಕ್ರಿಯೆ ನೀಡದ ಇಲಿಯಾನ ಸುಮ್ಮನಾಗಿದ್ದಾಳೆ.

ಮುಂಬೈ : ಇಲಿಯಾನ ಡಿಕ್ರೂಜ್ ಮತ್ತು ಅಜಯ್ ದೇವಗನ್ ಒಟ್ಟಿಗೆ ‘ರೈಡ್’ ಚಿತ್ರದ ಆಡಿಯೋ ಲಾಂಚ್‌ನಲ್ಲಿ ತೊಡಗಿದ್ದ ವೇಳೆ ಅಜಯ್ ದೇವಗನ್ ಕಡೆಯಿಂದ ಇಲಿಯಾನ ಕಡೆಗೆ ಒಂದು ಪ್ರಶ್ನೆ ಹಾರಿ ಬರುತ್ತದೆ ‘ನೀನು ಮದುವೆಯಾಗಿದ್ದೀಯಾ?’ ಎಂದು. ಇದನ್ನು ಕೇಳಿದ್ದೇ ಅಲ್ಲಿದ್ದವರೆಲ್ಲಾ ಒಂದು ಕ್ಷಣ ಅವಕ್ಕಾಗಿ ಅತ್ತಲೇ ನೋಡಿದರು. ಇದಕ್ಕೆ ಏನೂ ಪ್ರತಿಕ್ರಿಯೆ ನೀಡದ ಇಲಿಯಾನ ಸುಮ್ಮನಾಗಿದ್ದಾಳೆ.

ತದನಂತರ ಇದರ ಬಗ್ಗೆ ಕೇಳಿದಾಗ ನನಗೆ ನನ್ನ ವೈಯಕ್ತಿಕ ವಿಚಾರಗಳನ್ನು ಸಿನಿಮಾ ವೇದಿಕೆಯಲ್ಲಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಸಿನಿಮಾವನ್ನು ಸಿನಿಮಾವಾಗಿ, ವೈಯಕ್ತಿಕ ಜೀವನನ್ನು ವೈಯಕ್ತಿಕವಾಗಿಯೇ ನೋಡುತ್ತೇನೆ. ಎರಡರ ನಡುವೆ ಒಂದು ದೊಡ್ಡ ಗೆರೆ ಹಾಕಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

ಅಷ್ಟಕ್ಕೂ ಅಜಯ್ ದೇವಗನ್ ಈ ಪ್ರಶ್ನೆಯನ್ನು ಯಾಕೆ ಕೇಳಿದರು ಎಂದು ಕೆದಕಿದಾಗ ಕಳೆದ ಇತ್ತೀಚೆಗೆ ಇಲಿಯಾನ ಟ್ವಟ್ಟರ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಆ್ಯಂಡ್ರೂ ಜೊತೆಗಿನ ಫೋಟೋ ಹಾಕಿ ಇದು ನನ್ನ ಜೀವನದ ಅತ್ಯಂತ ಸುಂದರ ಕ್ಷಣ ಎಂದು ಬರೆದುಕೊಂಡಿದ್ದರು.

ಇದು ಸಾಕಷ್ಟು ಸುದ್ದಿಯೂ ಆಗಿತ್ತು. ಇದೇ ಹಿನ್ನೆಲೆಯಲ್ಲಿ ದೇವಗನ್ ಇಲಿಯಾನಗೆ ಈ ಪ್ರಶ್ನೆ ಕೇಳಿರಬಹುದು. ಆದರೆ ಸಾರ್ವಜನಿಕವಾಗಿ ಏನ್ನನಾದರೂ ಕೇಳುವಾಗ ಯಾರೇ ಆದರೂ ಸ್ವಲ್ಪ ಹುಷಾರಾಗಿರಬೇಕು.?

loader