ಕೊಡಿಯಾಲ್ ಬೈಲಿನ ಟಿಎಂಎ ಪೈ ಹಾಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಸೇರಿದಂತೆ ತಾಯಿ ಬೃಂದಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ಭಾಗಿಯಾಗಿದ್ದರು.

ಮಂಗಳೂರು(ಡಿ.3): ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಮಂಗಳೂರಿಗೆ ಇಂದು ಭೇಟಿ ನೀಡಿದ್ದಾರೆ. ತಾಯಿ ಬೃಂದಾ ರೈ ಸೋದರನ ಮಗಳ ಮದುವೆ ಸಮಾರಂಭಕ್ಕಾಗಿ ಐಶ್ವರ್ಯ ರೈ ಕುಟುಂಬ ಸಮೇತ ಮಂಗಳೂರಿಗೆ ಆಗಮಿಸಿದ್ದರು.

ಕೊಡಿಯಾಲ್ ಬೈಲಿನ ಟಿಎಂಎ ಪೈ ಹಾಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಸೇರಿದಂತೆ ತಾಯಿ ಬೃಂದಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ಭಾಗಿಯಾಗಿದ್ದರು.

ಈ ವೇಳೆ ಬಾಲಿವುಡ್ ನಟಿ ಐಶ್ವರ್ಯ ಹಿರಿಯರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಅವರೇ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದ್ದರು.