ಅಜಾನ್ ಸದ್ದು ಕೇಳುತ್ತಲೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಡು ಹೇಳೋದನ್ನ ನಿಲ್ಲಿಸಿದ ಶೆಹನಾಜ್!
ಶೆಹನಾಜ್ ಗಿಲ್ ಇತ್ತೀಚೆಗೆ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದ ಬಳಿಕ ಹಾಡು ಹೇಳುತ್ತಿದ್ದರು. ಅದೇ ಸಮಯಕ್ಕೆ ಆಜಾನ್ ಸದ್ದು ಕೇಳಿದ್ದರಿಂದ ಗೌರವಪೂರ್ಣವಾಗಿ ಹಾಡು ಹೇಳೋದನ್ನ ನಿಲ್ಲಿಸಿದ್ದರು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ನವದೆಹಲಿ (ಫೆ.23): ಶೆಹನಾಜ್ ಗಿಲ್ ಅದಾಗಲೇ ತಮ್ಮ ಗಾಯನ ಹಾಗೂ ನಟನೆಯ ಮೂಲಕ ಪ್ರಖ್ಯಾತರಾಗಿದ್ದರೂ, ಬಿಗ್ ಬಾಸ್ 13ನೇ ಸೀಸನ್‌ನಲ್ಲಿ ಸ್ಪರ್ಧೆ ಮಾಡಿದ ಬಳಿಕ ಅಪಾರ ಪ್ರಮಾಣವಾದ ಪ್ರಖ್ಯಾತಿ ಗಳಿಸಿದ್ದರು. ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ ಅವರೊಂದಿಗಿನ ಇವರ ಕೆಮಿಸ್ಟ್ರಿ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. 'ಸಿದ್‌ನಾಜ್' ಫ್ಯಾನ್ಸ್ ಗ್ರೂಪ್‌ಗಳು ಕೂಡ ಇವರಿಬ್ಬರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಇನ್ನು ಸಿದ್ಧಾರ್ಥ್ ಶುಕ್ಲಾ ಸಾವು ಕಂಡಾಗ, ಸಿದ್ಧಾರ್ಥ್‌ಗೆ ಮರುಗಿದವರು, ಶೆಹನಾಜ್‌ರ ಸ್ಥಿತಿಯೂ ಕಂಡು ಬೇಸರ ವ್ಯಕ್ತಪಡಿಸಿದ್ದರು. ಸಿದ್ಧಾರ್ಥ್ ಸಾವಿನ ಬಳಿಕ ಸಾಕಷ್ಟು ತಿಂಗಳ ಎಲ್ಲಿಯೂ ಕಾಣಿಸಿಕೊಳ್ಳದೇ ಇದ್ದ ಶೆಹನಾಜ್ ಗಿಲ್, ಇತ್ತೀಚೆಗೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ತಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲೂ ಅವರು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶೆಹನಾಜ್ ಗಿಲ್ ಭಾಗವಹಿಸಿದ್ದರು. ಈ ವೇಳೆ ವೇದಿಕೆಯ ಮೇಲೆ ಅವರು ಹಾಡು ಹೇಳುತ್ತಿದ್ದರು. ಇದೇ ಸಮಯದಲ್ಲಿ ಅಜಾನ್ ಸದ್ದು ಬರುತ್ತಿತ್ತು. ಗೌರವಪೂರ್ವಕವಾಗಿ ಶೆಹನಾಜ್ ಗಿಲ್ ಅಲ್ಲಿಯೇ ತಮ್ಮ ಹಾಡು ನಿಲ್ಲಿಸಿದ್ದರು. ಶೆಹನಾಜ್ ಅವರ ಈ ವರ್ತನೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಶೆಹನಾಜ್ ಗಿಲ್ ತಮ್ಮ ವಿನಮ್ರ ಸ್ವಭಾವದಿಂದ ಮತ್ತೊಮ್ಮೆ ಎಲ್ಲರ ಹೃದಯ ಗೆದ್ದಿದ್ದಾರೆ. ಇತ್ತೀಚಿಗೆ ನಡೆದ ಅವಾರ್ಡ್ ಫಂಕ್ಷನ್ ನೈಟ್ ನಲ್ಲಿ ನಟಿ ವೇದಿಕೆಯ ಮೇಲೆ ಹಾಡುತ್ತಿದ್ದಳು. ಈ ವೇಳೆ, ಆಜಾನ್ ಕರೆಯನ್ನು ಅವರು ಕೇಳಿದರು. ಇದನ್ನು ಕೇಳುತ್ತಲೇ, ಶೆಹನಾಜ್ ಗಿಲ್ ತಮ್ಮ ಹಾಡನ್ನು ನಿಲ್ಲಿಸಿದರು. ಈ ಕ್ಷಣದ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ನಟಿಯ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೋದಲ್ಲಿ, ಶೆಹನಾಜ್ ಪ್ರಾರ್ಥನೆ ನಡೆಯುತ್ತಿರುವಾಗ ಮೈಕ್ ಹಿಡಿದುಕೊಂಡು ಮೌನವಾಗಿ ನಿಂತಿದ್ದರು.ಡಿಜಿಟಲ್ ಪರ್ಸನಾಲಿಟಿ ಆಫ್ ಇಯರ್ ಪ್ರಶಸ್ತಿ ಗೆದ್ದಿದ್ದ ಶೆಹನಾಜ್ ಗಿಲ್ ಅದನ್ನು ಸ್ವೀಕರಿಸಲು ವೇದಿಕೆಗೆ ಬಂದಿದ್ದರು.
ಈ ಕುರಿತಾಗಿ ಅಭಿಮಾನಿಯೊಬ್ಬರು ಬರೆದಿದ್ದು, 'ಶೆಹನಾಜ್ ಅವರಿಗೆ ಹಾಡಲು ಕೇಳಿದಾಗ, ಅವರು ಖುಷಿಯಿಂದಲೇ ಹಾಡಲು ಆರಂಭಿಸಿದರು. ಆದರೆ, ಈ ವೇಳೆ ಅಜಾನ್‌ನ ಸದ್ದು ಕೇಳುತ್ತಿತ್ತು. ಅದಕ್ಕಾಗಿ ಅವರು ಹಾಡನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದು ಪರಿಶುದ್ಧ ಹೃದಯ. ಅವರವರ ನಂಬಿಕೆಗಳಿಗೆ ನೀಡುವ ಗೌರವ. ಶೆಹನಾಜ್ ಅವರೇ ನನ್ನಲ್ಲಿ ಇರುವುದು ಒಂದೇ ಹೃದಯ ಅದನ್ನು ಎಷ್ಟು ಬಾರಿ ಗೆಲ್ಲುತ್ತೀರಿ' ಎಂದು ಬರೆದುಕೊಂಡಿದ್ದಾರೆ.
ಸಿದ್ಧಾರ್ಥ್ ಶುಕ್ಲಾ ಅವರ ನಿಧನದ ನಂತರದ ತನ್ನ ಲವ್‌ಲೈಫ್ ಬಗ್ಗೆ ಮಾತನಾಡಿದ ಶೆಹನಾಜ್ ಗಿಲ್
ಸಮಾರಂಭದಲ್ಲಿ, ಶೆಹನಾಜ್ ಗಿಲ್ ಮಾಧ್ಯಮಗಳೊಂದಿಗೆ ಉತ್ತಮವಾಗಿ ಸಂವಾದ ನಡೆಸಿದರು. ಇಲ್ಲಿನ ಪಾಪ್ ಸಂಸ್ಕೃತಿಯ ಕುರಿತು ಅವರಲ್ಲಿ ಪ್ರಶ್ನೆ ಮಾಡಿದಾಗ "ಮೇನ್ ತೋ ಮೀಡಿಯಾ ಕಿ ವಜಹ್ ಸೇ ಹೈ ಬನಿ ಹೂಂ. ಮುಜೆ ತೋ ಹಮೇಶಾ ಮೀಡಿಯಾ ನೆ ಹೈ ಹೈಲೈಟ್ ಕಿಯಾ ಹೈ, ಲೇಕಿನ್ ಅಗರ್ ಆಪ್ ಕೋಯಿ ಟ್ರೋಲಿಂಗ್ ಕಿ ಬಾತ್ ಕರೋಗೆ ತೋ ಉಸ್ಕೆ ಲಿಯೇ ಮೇರೆ ಪಾಸ್ ಕೋಯಿ ಜವಾಬ್ ನಹಿ ಹೈ (ಮಾಧ್ಯಮಗಳಿಂದಾಗಿ ನಾನು ಇಲ್ಲಿದ್ದೇನೆ, ನನ್ನನ್ನು ಯಾವಾಗಲೂ ಮಾಧ್ಯಮಗಳು ಮಾತ್ರ ಹೈಲೈಟ್ ಮಾಡುತ್ತವೆ. ಆದರೆ ನೀವು ಟ್ರೋಲಿಂಗ್ ಬಗ್ಗೆ ಮಾತನಾಡಿದರೆ, ನಿಮಗೆ ನನ್ನ ಬಳಿ ಉತ್ತರವಿಲ್ಲ)." ಎಂದು ಹೇಳಿದರು.
ರಾಘವ್ ಜುಯಲ್ ಜೊತೆಗಿನ ವದಂತಿಗಳ ಬಗ್ಗೆ ಶೆಹನಾಜ್ ಗಿಲ್ ಬಿಚ್ಚಿಟ್ರು ಸತ್ಯ
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ,ರಾಘವ್ ಜುಯಲ್ ಮತ್ತು ಸಿದ್ಧಾರ್ಥ್ ನಿಗಮ್ ಅವರೊಂದಿಗೆ ನಟಿಸುವ ಮೂಲಕ ಶೆಹನಾಜ್ ಗಿಲ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಸಲ್ಮಾನ್ ಸೆಪ್ಟೆಂಬರ್ 5 ರಂದು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಇದರ ನಂತರ, ಶೆಹನಾಜ್ 100% ಚಿತ್ರದಲ್ಲಿ ಜಾನ್ ಅಬ್ರಹಾಂ, ನೋರಾ ಫತೇಹಿ ಮತ್ತು ರಿತೇಶ್ ದೇಶಮುಖ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.