ನಟ ಹೃತಿಕ್ ರೋಶನು ಅವರು ಬಾಲಿವುಡ್‌ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದರೂ ಕೂಡ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎನ್ನಬಹುದು. ಕಾರಣ, ಅವರು ನಟಿಸಿದ ಮೊಟ್ಟಮೊದಲ ಸಿನಿಮಾ ಸೂಪರ್ ಹಿಟ್ ಆಗಿದ್ದರೂ ಕೂಡ, ಆ ಬಳಿಕ ತೆರೆಗೆ ಬಂದ ಹಲವು ಸಿನಿಮಾಗಳು ಅಷ್ಟೇನೂ ಯಶಸ್ಸು ಕಾಣಲಿಲ್ಲ.

ಬಾಲಿವುಡ್ ನಟ ಹೃತಿಕ್ ರೋಶನ್ (Hrithik Roshan) ಜಗತ್ತಿನ ಫೇಮಸ್ ಸೆಲೆಬ್ರಿಟಿ. ವಿಶ್ವದ ಅತ್ಯಂತ ಸುಂದರ ಪುರುಷರ ಪಟ್ಟಿಯಲ್ಲಿ ಬಾಲಿವುಡ್ ಹೃತಿಕ್ ರೋಶನ್ ಯಾವಾಗಲೂ ಸ್ಥಾನ ಪಡೆಯುತ್ತಾರೆ. ಹೃತಿಕ್ ರೋಷನ್ ಅವರು ಬಾಲಿವುಡ್‌ನ ಮುಖ್ಯ ನಿರ್ಮಾಪಕರಲ್ಲಿ ಒಬ್ಬರಾದ ರಾಕೇಶ್ ರೋಶನ್ ಅವರು ಪುತ್ರ ಎಂಬುದು ಬಹುತೇಕರಿಗೆ ಗೊತ್ತು. 'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ನಾಯಕನಟರಾಗಿ ಹೃತಿಕ್ ರೋಶನ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ, ಅದಕ್ಕೂ ಮೊದಲು ಅವರು ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ, ಕ್ಯಾಮೆರಾ ಹಿಂದೆ ಕೂಡ ಕೆಲಸ ಮಾಡಿ ಚಿತ್ರರಂಗದ ಆಗುಹೋಗುಗಳನ್ನು ತಿಳಿದುಕೊಂಡಿದ್ದಾರೆ.

ಇದೀಗ ನಟ ಹೃತಿಕ್ ರೋಶನ್ ಅವರ ಬಗ್ಗೆ ಹೊಸದೊಂದು ಸುದ್ದಿ ಸ್ಪೋಟವಾಗಿದೆ. ಅದೇನೆಂದರೆ, ಅವರು 1000 ಕೋಟಿ ಬ್ರಾಂಡ್ ಒಡೆಯರಾಗಿದ್ದು ಹೇಗೆಂಬ ಸೀಕ್ರೆಟ್. ಹೌದು, ಅಪ್ಪ ರಾಕೇಶ್ ರೋಶನ್ ಅವರ ಕೃಪಾಕಟಾಕ್ಷ ಇದ್ದರೂ ಕೂಡ ನಟ ಹೃತಿಕ್ ರೋಶನ್ ಅವರು ತಮ್ಮದೇ ಆದ ವ್ಯಾಪಾರ-ವಹಿವಾಟು ಹೊಂದಿದ್ದಾರೆ. ಅದರಲ್ಲಿ ಅವರು ಬರೋಬ್ಬರಿ 1000 ಕೋಟಿ ಬಿಸಿನೆಸ್ ರೀಚ್ ಆಗಿ ತಮ್ಮದೇ ಬ್ರಾಂಡ್ ಸೃಷ್ಟಿಸಿಕೊಂಡಿದ್ದಾರೆ. ಹಾಗಿದ್ರೆ, ನಟ ಹೃತಿಕ್ ರೋಶನ್‌ಗೆ ಅದೆಲ್ಲಾ ಹೇಗೆ ಸಾಧ್ಯವಾಯ್ತು..? ಇಲ್ಲಿದೆ ನೋಡಿ ಸೀಕ್ರೆಟ್‌ ಅನಾವರಣ...

ಹೌದು, ನಟ ಹೃತಿಕ್ ರೋಶನ್ ಅವರು ಅಷ್ಟು ದೊಡ್ಡ ಹಾಗೂ ಬಲಿಷ್ಠ ಸಾಮ್ರಾಜ್ಯ ಕಟ್ಟಲು ಕಾರಣ ಅವರ ಮ್ಯಾನೇಜರ್ ಎನ್ನಲಾಗುತ್ತಿದೆ. ಹೃತಿಕ್ ರೋಶನ್ ಅವರ ಮ್ಯಾನೇಜರ್ ಅಫ್ಸರ್ ಝೈದಿ (Afsar Zaidi) ಅವರು ಬಾಲಿವುಡ್‌ನಲ್ಲಿ ಬ್ರಾಂಡ್ ಕೋಟೆ ಕಟ್ಟುವುದರಲ್ಲಿ ಹೆಸರುವಾಸಿ ಎನ್ನಲಾಗಿದೆ. ಅವರೊಬ್ಬ ಮಾಸ್ಟರ್ ಮೈಂಡ್ ಎಂದು ಹೆಸರುವಾಸಿಯಾಗಿದ್ದು, ಕೋಟ್ಯಂತರ ರೂಪಾಯಿಯ ವ್ಯಾಪಾರ-ವಹಿವಾಟು ನಿರ್ವಹಿಸಲು ಹಾಗೂ ಕೋಟಿಕೋಟಿ ಗಳಿಕೆ ಸಾಮ್ರಾಜ್ಯ ಕಟ್ಟುವುದರಲ್ಲಿ ನಿಸ್ಸೀಮ ಎನ್ನಲಾಗಿದೆ. ಅದೇ ಅಫ್ಸರ್ ಝೈದಿ ನಟ ಹೃತಿಕ್ ರೋಶನ್ ಅವರ ಮ್ಯಾನೇಜರ್ ಆಗಿದ್ದಾರೆ. ಈ ಕಾರಣಕ್ಕೆ ಹೃತಿಕ್ ಅವರಿಗೆ ಕೋಟಿ ರೂ.ಗಳ ಸಾಮ್ರಾಜ್ಯವನ್ನು ಕಟ್ಟಲು ಸಾಧ್ಯವಾಗಿದ್ದು ಎನ್ನಲಾಗಿದೆ.

ಹೌದು, ನಟ ಹೃತಿಕ್ ರೋಶನು ಅವರು ಬಾಲಿವುಡ್‌ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದರೂ ಕೂಡ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎನ್ನಬಹುದು. ಕಾರಣ, ಅವರು ನಟಿಸಿದ ಮೊಟ್ಟಮೊದಲ ಸಿನಿಮಾ ಸೂಪರ್ ಹಿಟ್ ಆಗಿದ್ದರೂ ಕೂಡ, ಆ ಬಳಿಕ ತೆರೆಗೆ ಬಂದ ಹಲವು ಸಿನಿಮಾಗಳು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಈ ಕಾರಣದಿಂದ ನಟ ಹೃತಿಕ್ ರೋಶನ್ ಅವರು ಆರಕ್ಕೇರದ ಮೂರಕ್ಕಿಳಿಯದ ನಟರಾಗಿಯೇ ಉಳಿದುಕೊಂಡಿದ್ದಾರೆ. ಆದರೆ, ಅಪ್ಪನ ಹಂಗಿಲ್ಲದೇ ಬಿಸಿನೆಸ್‌ಮ್ಯಾನ್‌ ಆಗಿ ಅವರು ಸಕ್ಸಸ್ ಕಂಡಿದ್ದು, ಇದೀಗ ಬರೋಬ್ಬರಿ 1000 ಕೋಟಿ ರೂಗಳ ಒಡೆಯರಾಗಿದ್ದಾರೆ.

ಬಾಲಿವುಡ್‌ನಲ್ಲಿ ಬ್ರಾಂಡ್‌ ಸೃಷ್ಟಿಸಬಲ್ಲ ಅಪರೂಪದ ತಾಕತ್ತು ಹೊಂದಿರುವ ಅಫ್ಸರ್ ಝೈದಿ ಅವರು ಹಲವಾರು ಸೆಲೆಬ್ರಿಟಿಗಳ ಜೀವನದಲ್ಲಿ ಭಾರೀ ಮ್ಯಾಜಿಕ್ ಮಾಡಿದ್ದಾರೆ. ಉತ್ತಮ ಸ್ಟ್ರಾಟಜಿ ಹೊಂದಿರುವ ಅಫ್ಸರ್ ಝೈದಿ ಅವರು ತಮ್ಮ ಸಿಂಪಲ್ ಟೆಕ್ನಿಕ್ ಉಪಯೋಗಿಸಿ ಹೀಗೆ ಕೋಟಿಕೋಟಿ ರೂಗಳ ಕಿಂಗ್‌ಡಮ್ ಕಟ್ಟಲು ಸಹಾಯ ಮಾಡುವ ಮ್ಯಾನೇಜರ್ ಆಗಿದ್ದಾರೆ. ಅವರೇ ನಟ ಹೃತಿಕ್ ರೋಶನ್ ಮ್ಯಾನೇಜರ್ ಆಗಿದ್ದು, ಇದೀಗ ಅವರ ಹೆಸರು ಪ್ರಸಿದ್ಧಿಗೆ ಬರುತ್ತಿದೆ. ಅಫ್ಸರ್ ಝೈದಿ ಈಗ ಟ್ರೆಂಡಿಂಗ್ ಆಗಿದ್ದಾರೆ. ಯಾರ ಹಿಂದೆ ಯಾರು, ಯಾವ ಸಾಮ್ರಾಜ್ಯದ ಹಿಂದೆ ಯಾರ ಮಾಸ್ಟರ್‌ ಮೈಂಡ್ ಕೆಲಸ ಮಾಡುತ್ತದೆ ಎಂಬುದನ್ನು ಯಾರೂ ಕೂಡ ಅಷ್ಲುಟು ಸುಲಭವಾಗಿ ಊಹಿಸಿಲು ಸಾಧ್ಯವೇ ಇಲ್ಲ ಎನ್ನಬಹುದು.