ಭಾರತೀಯ ಜಾಹೀರಾತು ನಿರ್ಮಾಣ ವಲಯದ ಭೀಷ್ಮ ಎಂದೆ ಪ್ರಖ್ಯಾತರಾಗಿದ್ದ ಖ್ಯಾತ ಜಾಹೀರಾತು ನಿರ್ದೇಶಕ, ರಂಗಕರ್ಮಿ ಅಲಿಕ್‌ ಪದಮ್‌ಸೀ (90) ಇಲ್ಲಿ ನಿಧನರಾಗಿದ್ದಾರೆ.

ಮುಂಬೈ[ನ.18]:ಭಾರತೀಯ ಜಾಹೀರಾತು ನಿರ್ಮಾಣ ವಲಯದ ಭೀಷ್ಮ ಎಂದೇ ಪ್ರಖ್ಯಾತರಾಗಿದ್ದ ಖ್ಯಾತ ಜಾಹೀರಾತು ನಿರ್ದೇಶಕ, ರಂಗಕರ್ಮಿ ಅಲಿಕ್‌ ಪದಮ್‌ಸೀ (90) ಶನಿವಾರ ಇಲ್ಲಿ ನಿಧನರಾಗಿದ್ದರೆ.. ಪದಮ್‌ಸೀ ನಿಧನಕ್ಕೆ ರಾಷ್ಟ್ರಪತಿ ಕೋವಿಂದ್‌, ಪ್ರಧಾನಿ ಮೋದಿ ಸೇರಿದಂತೆ ಉದ್ಯಮ ವಲಯದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

Scroll to load tweet…

ಕಳೆದ 5-6 ದಶಕಗಳ ಅವಧಿಯಲ್ಲಿ ಭಾರತದಲ್ಲಿ 100ಕ್ಕೂ ಹೆಚ್ಚು ಉತ್ಪನ್ನಗಳನ್ನು ತಮ್ಮ ಖ್ಯಾತ ಜಾಹೀರಾತುಗಳ ಮೂಲಕವೇ ಜನಪ್ರಿಯರಾಗುವಂತೆ ಮಾಡಿದ್ದು, ಅವುಗಳಿಗೆ ದೊಡ್ಡ ಮಾರುಕಟ್ಟೆದೊರಕಿಸಿಕೊಟ್ಟಿದ್ದು ಪದಮ್‌ಸೀ ಅವರ ಹೆಗ್ಗಳಿಕೆ. ಬಜಾಜ್‌ ಕಂಪನಿಯ ಹಮಾರಾ ಬಜಾಜ್‌, ಜಲಪಾತದಲ್ಲಿ ಸ್ನಾನ ಮಾಡುವ ಲಿರಿಲ್‌ ಸೋಪ್‌ನ ಜಾಹೀರಾತು, ಎಂಆರ್‌ಎಫ್‌ನ ಮಸಲ್‌ ಮ್ಯಾನ್‌, ಸಫ್‌ರ್‍ನ ಲಲಿತಾಜಿ, ಕಾಮಸೂತ್ರದ ಪಾತ್ರಗಳು ಪದಮ್ಸೀ ಅವರಿಗೆ ಬಹುವಾಗಿ ಖ್ಯಾತಿ ತಂದುಕೊಟ್ಟಿದ್ದವು.

Scroll to load tweet…

ಇನ್ನು ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಡೇವಿಡ್‌ ಅಟೆನ್‌ಬರೋ ಅವರ ಗಾಂಧೀ ಚಿತ್ರದಲ್ಲಿ ಪದಮ್ಸೀ ಅವರು ಜಿನ್ನಾರ ಪಾತ್ರ ನಿರ್ವಹಿಸಿದ್ದರು. ಇವರ ಸೇವೆಯನ್ನು ಗಮನಿಸಿ 2000ನೇ ಇಸವಿಯಲ್ಲಿ ಪದ್ಮಶ್ರೀ ಗೌರವ ನೀಡಿ ಪುರಸ್ಕರಿಸಲಾಗಿತ್ತು.