ಮಲ್ಟಿಹೀರೋ ಸಿನಿಮಾಗಳನ್ನು ನಿರ್ದೇಶಿಸುವ ನಿರ್ದೇಶಕರಿರುವ ಹಾಗೆ, ಮಲ್ಟಿ ಹೀರೋಯಿನ್  ಸಿನಿಮಾಗಳ ಎಕ್ಸ್‌ಪರ್ಟ್ ನಿರ್ದೇಶಕರೂ ಅನೇಕರಿದ್ದಾರೆ. ಅವರ ಪೈಕಿ ಮೊದಲ ಸ್ಥಾನ ಯೋಗರಾಜ್ ಭಟ್ಟರಿಗೆ. ಅವರ ಇತ್ತೀಚಿನ ಚಿತ್ರಗಳಲ್ಲಿ ಇಬ್ಬರೋ ಮೂವರೋ ನಾಯಕಿಯರು. ಅಂಥ ಮತ್ತೊಂದು ಸಿನಿಮಾ ಇದೀಗ ತಯಾರಾಗುತ್ತಿದೆ. ಆ ಚಿತ್ರದ ಎರಡನೇ ನಾಯಕಿಯಾಗಿ  ಮಂಗಳೂರಿನ ಸೋನಾಲ್ ಮೊಂಟೇರಿಯೋ  ಆಯ್ಕೆಯಾಗಿದ್ದಾರೆ.

ಬೆಂಗಳೂರು (ಜ.09): ಮಲ್ಟಿಹೀರೋ ಸಿನಿಮಾಗಳನ್ನು ನಿರ್ದೇಶಿಸುವ ನಿರ್ದೇಶಕರಿರುವ ಹಾಗೆ, ಮಲ್ಟಿ ಹೀರೋಯಿನ್ ಸಿನಿಮಾಗಳ ಎಕ್ಸ್‌ಪರ್ಟ್ ನಿರ್ದೇಶಕರೂ ಅನೇಕರಿದ್ದಾರೆ. ಅವರ ಪೈಕಿ ಮೊದಲ ಸ್ಥಾನ ಯೋಗರಾಜ್ ಭಟ್ಟರಿಗೆ. ಅವರ ಇತ್ತೀಚಿನ ಚಿತ್ರಗಳಲ್ಲಿ ಇಬ್ಬರೋ ಮೂವರೋ ನಾಯಕಿಯರು. ಅಂಥ ಮತ್ತೊಂದು ಸಿನಿಮಾ ಇದೀಗ ತಯಾರಾಗುತ್ತಿದೆ. ಆ ಚಿತ್ರದ ಎರಡನೇ ನಾಯಕಿಯಾಗಿ ಮಂಗಳೂರಿನ ಸೋನಾಲ್ ಮೊಂಟೇರಿಯೋ ಆಯ್ಕೆಯಾಗಿದ್ದಾರೆ.

ಸೋನಾಲಿಗೆ ನಟನೆ ಹೊಸದಲ್ಲ. ಕನ್ನಡದಲ್ಲಿ ‘ಅಭಿಸಾರಿಕೆ’ ಚಿತ್ರಕ್ಕೂ ನಾಯಕಿಯಾದ ಸೋನಾಲಿ ತುಳು ಭಾಷೆಯ ‘ಎಕ್ಕ ಸಕ್ಕ’, ‘ಜೈ ತುಳುನಾಡು’ ಚಿತ್ರಗಳ ಮೂಲಕ ನಟಿಯಾಗಿ ಹೆಸರು ಮಾಡಿದವರು. ಪ್ರಥಮ್ ನಟನೆಯ ‘ಎಂಎಲ್‌ಎ’ ಸಿನಿಮಾದಲ್ಲೂ ನಾಯಕಿ ಆಗಿದ್ದಾರೆ.

ಆದರೂ ಆಡಿಷನ್ ಮೂಲಕವೇ ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮ ಹೊಸ ಚಿತ್ರಕ್ಕೆ ನಾಯಕಿಯಾಗಿ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಸೋನಾಲಿ ‘ಸಾಜನ್ ಚಲೇ ಸಸೂರಾಲ್’ ಚಿತ್ರದ ಮುಂದುವರಿದ ಭಾಗದ ಚಿತ್ರದಲ್ಲೂ ನಟಿಸುತ್ತಿದ್ದಾರಂತೆ. ಹೊಸ ಹೀರೋ ಸಿನಿಮಾ ಆಗಿದ್ದರಿಂದ ಭಟ್ಟರು ಇಬ್ಬರು ನಾಯಕಿಯರನ್ನಿಟ್ಟುಕೊಂಡು ಕತೆ ಹೆಣೆದಿರಬಹುದಾ? ಭಟ್ಟರು ಹಾಗೆಲ್ಲ ಹೇಳುವುದಿಲ್ಲ.