ಲೂಸಿಯ ಬೆಡಗಿ ಶೃತಿ ಹರಿಹರನ್'ಗೆ ಮತ್ತೊಬ್ಬ ಸ್ಟಾರ್ ನಟನ  ಜೊತೆ ರೊಮ್ಯಾನ್ಸ್ ಮಾಡುವ ಚಾನ್ಸ್ ಸಿಕ್ಕಿದೆ.  

ಬೆಂಗಳೂರು (ಡಿ.04): ಲೂಸಿಯ ಬೆಡಗಿ ಶೃತಿ ಹರಿಹರನ್'ಗೆ ಮತ್ತೊಬ್ಬ ಸ್ಟಾರ್ ನಟನ ಜೊತೆ ರೊಮ್ಯಾನ್ಸ್ ಮಾಡುವ ಚಾನ್ಸ್ ಸಿಕ್ಕಿದೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಟಿಪಿಕಲ್ ಟೈಟಲ್'ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡುತ್ತಿರುವ ಮಲ್ಟಿ ಸ್ಟಾರ್ ಸಿನಿಮಾ. ರೆಬಲ್ ಸ್ಟಾರ್ ಅಂಬರೀಷ್ ಮತ್ತು ಕಿಚ್ಚ ಸುದೀಪ್ ಬಹಳ ವರ್ಷಗಳ ನಂತರ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ. ಸದ್ಯಕ್ಕೆ ಕಿಚ್ಚನ ಜೆಪಿ ನಗರ ನಿವಾಸದಿಂದ ಒಂದು ಗುಡ್ ನ್ಯೂಸ್ ಹೊರ ಬಿದ್ದಿದೆ.

ದರ್ಶನ್, ಉಪೇಂದ್ರರಂತಹ ಸ್ಟಾರ್ ನಟರ ಜೊತೆ ಡುಯ್ಯೆಟ್ ಹಾಡಿದ ಶೃತಿ ಹರಿಹರನ್, ಈಗ ಕಿಚ್ಚನ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ..ಅಂಬರೀಷ್ ಯವ್ವನದ ಪಾತ್ರವನ್ನ ಸುದೀಪ್ ಆಕ್ಟ್ ಮಾಡುತ್ತಿದ್ದು..ಈ ಯಂಗ್ ಹೀರೋಗೆ ಯಂಗ್ ಲೇಡಿಯಾಗಿ ಶೃತಿಹರಿಹನ್ ಆಕ್ಟ್ ಮಾಡುತ್ತಿದ್ದಾರೆ. ಈಗಾಗಲೇ ಶೃತಿ ಹರಿಹರನ್ ಜೊತೆ ಮಾತುಕಥೆ ಆಗಿದೆಯಂತೆ. ಈ ಮೂಲಕ ಲೂಸಿಯಾ ಬೆಡಗಿಗೆ ಮತ್ತೊಬ್ಬ ಸ್ಟಾರ್ ನಟನ ಜೊತೆ ಸ್ಕ್ರೀನ್ ಹಂಚಿಕೊಳ್ಳುವ ಬಂಪರ್ ಆಫರ್ ಸಿಕ್ಕಿದೆ. ಕಿಚ್ಚ ಸುದೀಪ್ ತನ್ನ ಜೊತೆ ಸಹ ನಿರ್ದೇಶನಾಗಿ ಬೆಳಸಿದ 25 ವರ್ಷದ ಯಂಗ್ ಡೈರೆಕ್ಟರ್, ಗುರುದತ್ತ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುದೀಪ್ ಮತ್ತು ಜಾಕ್ ಮಂಜು ಜಂಟಿ ನಿರ್ಮಾಣದಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನಿರ್ಮಾಣ ಆಗುತ್ತಿದೆ. ಸದ್ಯದಲ್ಲೇ ಶೃತಿ ಹರಿಹರನ್ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಸೆಟ್ಟು ಸೇರಿಕೊಳ್ಳಲಿದ್ದಾರೆ.