ಅಭಿಮಾನಿ ಕೊನೆಯಾಸೆ ಈಡೇರಿಸಿದ ಬಾಲಿವುಡ್ ನಟಿ | ಈ ನಟಿಯ ಭೇಟಿ ನಂತರ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಾಲಕಿ | 

ಮುಂಬೈ (ಜ. 31): ಸೆಲಬ್ರಿಟಿಗಳೆಂದರೆ ಅವರ ಸುತ್ತ ಒಂದಷ್ಟು ಅಭಿಮಾನಿಗಳ ಬಳಗವೇ ಇರುತ್ತದೆ. ನೆಚ್ಚಿನ ನಟ, ನಟಿಯರ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಕೆಲವೊಮ್ಮೆ ಅವರನ್ನು ಭೇಟಿಯಾಗುವುದು, ಮಾತನಾಡುವುದು ಅವರ ಕೊನೆಯಾಸೆಯಾಗಿರುತ್ತದೆ. 

ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿರುವ 13 ವರ್ಷದ ಬಾಲಕಿ ಸುಮಯ್ಯಾ ಶ್ರದ್ಧಾ ಕಪೂರ್ ಅಭಿಮಾನಿ. ಅವರನ್ನು ಭೇಟಿಯಾಗುವುದು ನನ್ನ ಕೊನೆಯಾಸೆ ಎಂದು ಪೋಷಕರು, ವೈದ್ಯರ ಬಳಿ ಹೇಳಿಕೊಂಡಿದ್ದಾಳೆ. ಈ ವಿಷಯವನ್ನು ಶ್ರದ್ಧಾ ಕಪೂರ್ ಗೆ ತಿಳಿಸಲಾಗಿತ್ತು. 

ಶ್ರದ್ಧಾ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ವಿಷಯ ತಿಳಿದ ಕೂಡಲೇ ಬಾಲಕಿ ಆಸೆ ಈಡೇರಿಸಲು ಶೂಟಿಂಗ್ ಬಿಟ್ಟು ಆಸ್ಪತ್ರೆಗೆ ಧಾವಿಸಿದ್ದಾರೆ. ಬೇರೆಯವರಿಗೆ ಗೊತ್ತಾದರೆ ಇತರೆ ರೋಗಿಗಳಿಗೆ ತೊಂದರೆ ಆದೀತೆಂದು ಬುರ್ಖಾ ಧರಿಸಿ ಬಂದಿದ್ದರು. 

ಅಚ್ಚರಿ ಎಂದರೆ ಶ್ರದ್ಧಾ ಭೇಟಿ ನಂತರ ಸುಮಯ್ಯಾ ಖುಷಿಯಾಗಿದ್ದಾಳೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಇದಕ್ಕಿಂತ ಖುಷಿ ವಿಚಾರ ಬೇರೇನಿದೆ ಅಲ್ವಾ? 

Scroll to load tweet…
Scroll to load tweet…