ಕೆಲವೊಂದು ಧಾರ್ಮಿಕ ನಂಬಿಕೆಗಳಿಗೆ, ಆಚರಣೆಗಳಿಗೆ ಅಪವಾದಗಳಿರುತ್ತದೆ ಎನ್ನುವುದಕ್ಕೆ ಗೌರಿ- ಗಣೇಶ ಹಬ್ಬವೇ ಸಾಕ್ಷಿ. ಎಲ್ಲಾ ಜಾತಿ- ಧರ್ಮದವರು ಗಣಪತಿ ಬಪ್ಪ ಮೋರೇಯಾ ಎನ್ನುತ್ತಾರೆ. ನಟಿ ಸಾರಾ ಅಲಿ ಖಾನ್ ಗಣೇಶನಿಗೆ ವಂದಿಸುತ್ತಿರುವ ಫೋಟೋವನ್ನು ಹಾಕಿ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. 

ಗಣೇಶ ಮೂರ್ತಿ ಎದುರು ನಿಂತು, ಗಣಪತಿ ಬಪ್ಪ ಮೋರೆಯಾ! ನಿಮ್ಮ ಎಲ್ಲಾ ವಿಘ್ನಗಳನ್ನು ವಿನಾಯಕ ನಿವಾರಿಸಲಿ. ನಿಮ್ಮ ಮನೆ, ಮನಗಳಲ್ಲಿ ಸುಖ-ಶಾಂತಿ ನೆಮ್ಮದಿ ದೊರಕಲಿ, ಯಶಸ್ಸು ಸಿಗಲಿ ಎಂದು ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. 

 

ಇದೀಗ ಸಾರಾ ಅಲಿ ಖಾನ್ ವಿರುದ್ಧ ಫತ್ವಾ ಹೊರಡಿಸಲಾಗಿದೆ. ‘ಅಲ್ಲಾ ಒಬ್ಬನೇ ದೇವರು’ ಎಂದು ಮೂಲಭೂತವಾದಿಗಳು ಹೇಳಿದ್ದಾರೆ. 

ಅಭಿಮನಿಗಳು ಸಾರಾ ಅಲಿಖಾನ್ ಬೆಂಬಲಕ್ಕೆ ನಿಂತಿದ್ದಾರೆ. ಮುಸಲ್ಮಾನ ಅಭಿಮಾನಿಯೊಬ್ಬರು, ನಾನು ಕೂಡಾ ಮುಸ್ಲಿಂ. ನಾನು ಸಾರಾರಿಗೆ ಬೆಂಬಲಿಸುತ್ತೇನೆ. ಇದು ಭಾರತ. ಇಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುತ್ತೇವೆ ಎಂದರೆ ಇನ್ನೊಬ್ಬರು ಇದರಲ್ಲಿ ಹುಳುಕು ಹುಡುಕುವ ಅಗತ್ಯ ಇಲ್ಲ. ಅವರು ಹಿಂದೂ ಧರ್ಮದ ಆಚರಣೆಯನ್ನು ಗೌರವಿಸಿದ್ದಾರೆ ಎಂದಿದ್ದಾರೆ. 

ಸಾರಾ ಸದ್ಯ ವರುಣ್ ಧವನ್ ಜೊತೆ ಕೂಲಿ ನಂ 1 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.