ಅಭಿಮಾನಿಯ ‘ಟೇಸ್ಟ್’ ಮೆಚ್ಚಿದ ರಾಧಿಕಾ..!

Actress Radhika Pandit Happy over his Fan putting her photo on Auto
Highlights

ಆಟೋ ಮೇಲೆ ರಾಧಿಕಾ ಸಿಗರೇಟ್ ಸೇದುತ್ತಿರುವ ಫೋಟೋ

ವಿಭಿನ್ನ ಪಾತ್ರಗಳನ್ನೂ ಇಷ್ಟಪಡುವ ಅಭಿಮಾನಿಗಳಿಗೆ ರಾಧಿಕಾ ಥ್ಯಾಂಕ್ಸ್

ಆಟೋದ ಫೋಟೋ ಎಫ್ ಬಿ ಯಲ್ಲಿ ಶೇರ್ ಮಾಡಿದ ರಾಧಿಕಾ 

ಬೆಂಗಳೂರು(ಜೂ.9): ಚಂದನವನದ ಸುಂದರಿ ರಾಧಿಕಾ ಪಂಡಿತ್ ಫೂಲ್ ಖುಷಿಯಲ್ಲಿದ್ದಾರೆ. ಹಾಗಂತ ಪತಿ ಯಶ್ ಏನಾದ್ರೂ ಗಿಫ್ಟ್ ಕೊಟ್ರಾ ಅಂತಾ ತಿಳ್ಕೋಬೇಡಿ. ರಾಧಿಕಾ ಅಭಿಮಾನಿಯೊಬ್ಬ ಅವರ ಇಷ್ಟದ ಫೋಟೋವೊಂದನ್ನು ತನ್ನ ಆಟೋ ಮೇಲೆ ಹಾಕಿಕೊಂಡಿದ್ದೇ ಅವರ ಖುಷಿಗೆ ಕಾರಣವಂತೆ.

ಹೌದು, ರಾಧಿಕಾ ಅಭಿಮಾನಿಯೊಬ್ಬ ಅವರ ಅಭಿನಯದ ರಾಮಾಚಾರಿ ಚಿತ್ರದ ಫೋಟೋವೊಂದನ್ನು ತನ್ನ ಆಟೋ ಹಿಂದೆ ಅಂಟಿಸಿದ್ದಾನೆ. ಇದು ಅಂತಿಂತ ಫೋಟೋ ಅಲ್ಲ. ರಾಧಿಕಾ ಸಿಗರೇಟ್ ಸೇದುತ್ತಿರುವ ಫೋಟೋ ಇದಾಗಿದ್ದು, ಖುದ್ದು ರಾಧಿಕಾ ಈ ಆಟೋದ ಫೋಟೋ ಶೇರ್ ಮಾಡಿದ್ದಾರೆ.

ಅಭಿಮಾನಿಗಳು ನಮ್ಮನ್ನು ತರಹೇವಾರಿ ಅವತಾರದಲ್ಲಿ ಇಷ್ಟಪಡುತ್ತಾರೆ ಎಂಬುದೇ ಖುಷಿಯ ವಿಚಾರ ಎಂದು ಹೇಳಿರುವ ರಾಧಿಕಾ, ಅಭಿಮಾನಿಗಳು ತಮಗೆ ತೋರಿಸಿದ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಆಟೋ ಚಾಲಕನ ಕುರಿತು ಯಾವುದೇ ಮಾಹಿತಿ ಇಲ್ಲವಾದರೂ , ಆತನ ಅಭಿಮಾನಕ್ಕೆ ಮನಸೋತಿರುವುದಾಗಿ ರಾಧಿಕಾ ತಿಳಿಸಿದ್ದಾರೆ.

loader