ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿಯರು ಕಿರುತೆರೆಗೆ ಬರುತ್ತಿರುವುದು ಹೆಚ್ಚಾಗುತ್ತಿದೆ. ದೇವಕಿ ಚಿತ್ರದ ಯಶಸ್ಸಿನ ನಂತರ ನಟಿ ಪ್ರಿಯಾಂಕ ಚೋಪ್ರಾ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. 

ಅರೇ! ಪ್ರಿಯಾಂಕ ಉಪೇಂದ್ರ ಕಿರುತೆರೆಗಾ? ಎಂದು ಅಚ್ಚರಿಪಡಬೇಡಿ. ಹೌದು ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ‘ನಾನು ನನ್ನ ಕನಸು’ ಎನ್ನುವ ಧಾರಾವಾಹಿಯಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳಲಿದ್ದಾರೆ. 

ನಾನು ನನ್ನ ಕನಸು ಆಗಸ್ಟ್ 5 ರಿಂದ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಗೆಸ್ಟ್ ಅಪಿಯರೆನ್ಸ್ ಕೊಡಲಿದ್ದಾರೆ ಪ್ರಿಯಾಂಕ. ಇದು ಅಪ್ಪ - ಮಗಳ ನಡುವಿನ ಮಧುರವಾದ ಬಾಂಧವ್ಯವನ್ನು ಹೇಳುವ ಧಾರಾವಾಹಿಯಾಗಿದೆ. 

 

ಪ್ರಿಯಾಂಕ ಉಪೇಂದ್ರ ದೇವಕಿ ಸಿನಿಮಾ ನಿರೀಕ್ಷಿತ ಮಟ್ಟದಲ್ಲದ್ದದಿದ್ದರೂ ಒಂದು ಮಟ್ಟಿಗೆ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಮಗಳು ಐಶ್ವರ್ಯಾ ಉಪೇಂದ್ರ ಕೂಡಾ ನಟಿಸಿದ್ದಾರೆ.