ಬಾಲಿವುಡ್ ಫೇರಿ ಟೇಲ್ ಮ್ಯಾರೇಜ್ ಆದ ಪ್ರಿಯಾಂಕ್ ಚೋಪ್ರಾ ಹಾಗೂ ನಿಕ್ ಜೋನಾಸ್ ದಾಂಪತ್ಯದ ಬಗ್ಗೆ ಈಗ ಕೆಲವೊಂದು ವಿಚಾರ ಹೊರ ಬರುತ್ತಿದೆ. ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕ ಮಾತನಾಡುತ್ತಾ, ದಾಂಪತ್ಯದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ಪ್ರಿಯಾಂಕಾಗೆ ಅಡುಗೆ ಮಾಡಲು ಬರುವುದಿಲ್ಲವಂತೆ. ಅತ್ತೆ ಮಾಡುವ ಅಡುಗೆಯನ್ನೇ ತಿನ್ನುತ್ತಾರಂತೆ. ಆದರೆ ಆ ಅಡುಗೆಯೂ ಪಿಗ್ಗಿಗೆ ಅಷ್ಟೊಂದು ಇಷ್ಟ ಆಗುವುದಿಲ್ಲವಂತೆ. ಈ ಕಾರಣಕ್ಕೆ ನಾನು ನಿಕ್ ಗೆ ಉತ್ತಮ ಪತ್ನಿ ಅಲ್ಲವೆಂದು ಹೇಳಿಕೊಂಡಿದ್ದಾರೆ.

ಇನ್ನು ಕೆಲದಿನಗಳ ಹಿಂದೆ ನಿಕ್ -ಪ್ರಿಯಾಂಕಾಳಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆ ಬಾಳುವ ಮರ್ಸಡೀಸ್ ಬೆಂಝ್ ಮೇಬ್ಯಾಚ್ S650 ಕಾರನ್ನು ಉಡುಗೊರೆ ನೀಡಿದ್ದಾರೆ.